BELTHANGADI
ಲವ್ ಜಿಹಾದ್ ಆರೋಪ – ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ

ಬೆಳ್ತಂಗಡಿ ಜೂನ್ 03: ಕರಾವಳಿಯಲ್ಲಿ ಮತ್ತೆ ಹಿಂದೂಯೇತರರ ನಿರ್ಬಂಧದ ಫಲಕಗಳು ರಾರಾಜಿಸತೊಡಗಿದೆ. ಪ್ರಸಿದ್ದ ಪುಣ್ಯಕ್ಷೇತ್ರ ಬೆಳ್ತಂಗಡಿಯ ಸೌತಡ್ಕ ಮಹಾಗಣಪತಿ ದೇವಸ್ಥಾನಕ್ಕೆ ಹಿಂದೂಯೇತರರ ವಾಹನ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಫಲಕ ವಿಎಚ್ ಪಿ ಹೆಸರಿನಲ್ಲಿ ಹಾಕಲಾಗಿದೆ.
ದೇವಸ್ಥಾನದ ಪ್ರವೇಶ ದ್ವಾರದ ಬಳಿಯೇ ಈ ಬ್ಯಾನರ್ ಆಳವಡಿಸಲಾಗಿದೆ. ಅಲ್ಲದೇ ದೇವಸ್ಥಾನದಲ್ಲಿ ನಿರ್ಬಂಧದ ಬ್ಯಾನರ್ ಆಳವಡಿಸಿ ಸಾಮಾಜಿಕ ತಾಣಗಳಲ್ಲಿ ವಿಎಚ್ ಪಿ ಅಭಿಯಾನ ಕೈಗೊಂಡಿದೆ. ಹಿಂದೂಗಳ ಶ್ರದ್ದಾಕೇಂದ್ರವಾದ ಸೌತಡ್ಕಕ್ಕೆ ಅನ್ಯಕೋಮಿನವರು ಪ್ರವೇಶಿಸಿ ಭಕ್ತಾಧಿಗಳನ್ನ ಲವ್ ಜಿಹಾದ್ ಹಾಗೂ ಇತರೆ ದುಷ್ಕೃತ್ಯ ಎಸಗಿರೋದು ಕಂಡು ಬಂದಿದೆ. ಹೀಗಾಗಿ ಹಿಂದುಗಳಲ್ಲದವರ ವಾಹನಗಳು ದೇವಸ್ಥಾನ ಪ್ರವೇಶ ಮಾಡದಂತೆ ನಿರ್ಬಂಧ ವಿಧಿಸಿ ಫಲಕ ಹಾಕಲಾಗಿದೆ.

ದೇವಸ್ಥಾನಗಳಿಗೆ ಭಕ್ತರನ್ನು ಕರೆತರದಂತೆ ಮುಸ್ಲಿಂ ಆಟೋ ಚಾಲಕರಿಗೆ ನಿರ್ಬಂಧ ಅಭಿಯಾನ ಆರಂಭಿಸಿದ್ದ ವಿಎಚ್ ಪಿ, ಆಟೋಗಳ ಜೊತೆಗೆ ಎಲ್ಲಾ ಹಿಂದೂಯೇತರರ ವಾಹನಗಳಿಗೆ ನಿರ್ಬಂಧ ವಿಧಿಸಿ ಫಲಕ ಅಳವಡಿಸಿದೆ. ಪರಿಸ್ಥಿತಿ ಕೈ ಮೀರಿದ್ರೆ ಜಿಲ್ಲಾಡಳಿತ ಹೊಣೆ ಅಂತ ವಿಎಚ್ ಪಿ ಎಚ್ಚರಿಕೆ ನೀಡಿದ್ದು, ಮುಸ್ಲಿಮರ ಆಟೋಗಳಲ್ಲಿ ಪ್ರಯಾಣಿಸದಂತೆ ಹಿಂದೂ ಹೆಣ್ಮಕ್ಕಳಿಗೆ ಕರೆ ನೀಡಿದೆ.