LATEST NEWS
ಧ್ವನಿ ವರ್ಧಕ ಬಳಕೆ ಅನುಮತಿಗೆ ಸಮಿತಿ ರಚನೆ – ಜಿಲ್ಲಾಧಿಕಾರಿ
ಮಂಗಳೂರು ಮೇ 26: ಸೌಂಡ್ ಸಿಸ್ಟಮ್ಸ್ ಉದ್ಯಮ ನಡೆಸುವವರು 15 ದಿನಗಳ ಒಳಗಾಗಿ ಅಧಿಕೃತ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಸಾರ್ವಜನಿಕ ಹಾಗೂ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳು ಮತ್ತು ಧ್ವನಿ ಉತ್ಪಾದಿಸುವ ಉಪಕರಣಗಳ ಬಳಕೆ ಮಾಡುವ ಸಂಬಂಧ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೇಟ್ ಉತ್ತರ ವಿಭಾಗ, ದಕ್ಷಿಣ ವಿಭಾಗ ಹಾಗೂ ಕೇಂದ್ರ ವಿಭಾಗ, ಬಂಟ್ವಾಳ ತಾಲ್ಲೂಕು, ಪುತ್ತೂರು– ಕಡಬ ತಾಲ್ಲೂಕು, ಬೆಳ್ತಂಗಡಿ ತಾಲ್ಲೂಕು, ಸುಳ್ಯ ತಾಲ್ಲೂಕುಗಳಿಗೆ ಸಮಿತಿ ರಚಿಸಲಾಗಿದೆ.
15 ದಿನಗಳ ಒಳಗಾಗಿ ಸಂಬಂಧಪಟ್ಟ ಅಂಗಡಿ ಮಾಲಕರು ಅನುಮತಿ ಪಡೆಯಬೇಕು ಎಂದು ಹೇಳಿದ ಅವರು ಅನುಮತಿ ಪಡೆಯದಿದ್ದಲ್ಲಿ ಇಂತಹ ಉಪಕರಣಗಳನ್ನು ತೆರವುಗೊಳಿಸಲಾಗುತ್ತದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.