BANTWAL
ಕೊರೊನಾದಿಂದ ಮೃತಪಟ್ಟ ತಂದೆ ಅಂತ್ಯಸಂಸ್ಕಾರ ಸಂದರ್ಭ ಹೃದಯಾಘಾತಕ್ಕೊಳಗಾಗಿ ಮಗ ಸಾವು

ಬಂಟ್ವಾಳ ಜೂನ್ 02: ಕೊರೊನಾ ದಿಂದ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರದ ವೇಳೆ ಹೃದಯಾಘಾತಕ್ಕೆ ಒಳಗಾಗಿ ಮಗನೂ ಸಾವನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ಪುಣಚ ಎಂಬಲ್ಲಿ ನಡೆದಿದೆ.
ಆಸ್ಟ್ರೇಲಿಯಾದಲ್ಲಿ ಕೆಲಸದಲ್ಲಿದ್ದ ಶೈಲೇಶ್ ಶೆಟ್ಟಿ(44) ಕಳೆದ ತಿಂಗಳ ಹಿಂದ ಊರಿಗೆ ಆಗಮಿಸಿದ್ದರು, ಇತ್ತೀಚೆಗೆ ಅವರ ತಂದೆ ಭುಜಂಗ ಶೆಟ್ಟಿ ಅವರಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಭುಜಂಗ ಶೆಟ್ಟಿ ಅವರು ನಿನ್ನೆ ಜೂನ್ 1 ರಂದು ನಿಧನರಾಗಿದ್ದರು.

ಇಂದು ಅವರ ಅಂತ್ಯ ಸಂಸ್ಕಾರದ ಸಂದರ್ಭ ಅವರ ಮಗ ಶೈಲೆಶ್ ಶೆಟ್ಟಿ ಹೃದಯಾಘಾತಕ್ಕೆ ಒಳಗಾಗಿ ಸಾವನಪ್ಪಿದ್ದಾರೆ.