DAKSHINA KANNADA
ಯಾವನೋ ಒಬ್ಬ ಮುಟ್ಟಾಳ ಎಲ್ಲಿಂದಲೋ ಬಂದು ಮಾತನಾಡಿದ್ದಾನೆ: ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು,ಜುಲೈ 08: ಹಿಂದೂ ಜಾಗರಣ ವೇದಿಕೆಯ ಪ್ರತಿಭಟನೆಯಲ್ಲಿ ಪುತ್ತೂರು ಶಾಸಕನಿಗೆ ಅವಹೇಳನಕಾರಿ ಹೇಳಿಕೆಗೆ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದಾರೆ.
ಇತರರನ್ನು ಏಕವಚನದಲ್ಲಿ ಮಾತನಾಡೋದು ಅವರ ಸಂಸ್ಕೃತಿಯಲ್ಲ, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪುತ್ತೂರಿನ ಆ ಸಂಘಟನೆಗೆ ಸೇರಿದ ಕೇವಲ ಇಬ್ಬರೇ ವ್ಯಕ್ತಿಗಳು ಇದ್ದರು. ಉಳಿದವರೆಲ್ಲಾ ಸುಳ್ಯ ಮತ್ತು ಇತರ ಕಡೆಗಳಿಗೆ ಸೇರಿದವರು, ಪ್ರತಿಭಟನೆಯಲ್ಲಿ ಯಾವನೋ ಒಬ್ಬ ಮುಟ್ಟಾಳ ಎಲ್ಲಿಂದಲೋ ಬಂದು ಮಾತನಾಡಿದ್ದಾನೆ.

ಅವನು ಸ್ವಲ್ಪ ಹೊತ್ತು ಪುತ್ತೂರಿನಲ್ಲಿರಬೇಕು, ಅವನಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತಿದೆ. ನಾವು ಯಾರಿಗೂ ವಿರೋದವಿಲ್ಲ, ಆದರೆ ಯಾರು ಅನಾವಶ್ಯಕವಾಗಿ ಇಂಥ ವಿಚಾರ ಸೃಷ್ಠಿ ಮಾಡುತ್ತಾರೋ ಅಂತವರಿಗೆ ಬುದ್ಧಿ ಕಲಿಸುವ ಕೆಲಸ ಮಾಡುತ್ತೇವೆ.
ಎಲ್ಲಾ ಕಡೆಯಿಂದಲೂ ಬುದ್ಧಿ ಕಲಿಸಲು ಗೊತ್ತಿದೆ. ಕಾನೂನು, ನ್ಯಾಯ ಮತ್ತು ಮಸಲ್ ಪವರ್ ಉಪಯೋಗಿಸಿ ಬುದ್ಧಿ ಕಲಿಸುತ್ತೇವೆ. ಯಾರನ್ನೋ ಏಕವಚನದಲ್ಲಿ ನಿಂದಿಸಿ ಯಾರೂ ದೊಡ್ಡ ಜನ ಆಗುದಿಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.