Connect with us

LATEST NEWS

ಸೋಲಾರ್ ದೀಪಗಳಿಗೆ ಕಳ್ಳರ ಕಾಟ

ಸೋಲಾರ್ ದೀಪಗಳಿಗೆ ಕಳ್ಳರ ಕಾಟ

ಪುತ್ತೂರು ಫೆಬ್ರವರಿ 18: ಬೀದಿ ದೀಪಕ್ಕಾಗಿ ಅಳವಡಿಸಿದ್ದ ಸೋಲಾರ್ ದೀಪಗಳಿಗೆ ಇದೀಗ ಕಳ್ಳರ ಹಾವಳಿ ಶುರುವಾಗಿದೆ. ಪುತ್ತೂರು ತಾಲೂಕಿನ ನೆಲ್ಯಾಡಿ, ಕಡಬ, ಅಲಂಕಾರು, ಬಲ್ಯ ,ಮಾದೇರಿ ಮೊದಲಾದ ಕಡೆ ಆಯಾ ಪಂಚಾಯತ್ ಗಳು ಅಳವಡಿಸಿದ್ದ ಸೋಲಾರ್ ಲೈಟ್ ಗಳ ಬ್ಯಾಟರಿಯನ್ನು ಕಳ್ಳರು ಕದ್ದೊಯ್ದಿದ್ದಾರೆ.

ರಸ್ತೆ ಬದಿಯಿರುವ ಬಹುತೇಕ ಎಲ್ಲಾ ಸೋಲಾರ್ ಲೈಟ್ ಗಳ ಬ್ಯಾಟರಿ ಇದೀಗ ಕಳ್ಳರ ಪಾಲಾಗಿದೆ‌. ಪ್ರತಿ ಬ್ಯಾಟರಿಗೆ ಸುಮಾರು 30 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಕಾರಿನಲ್ಲಿ ಬಂದ ಕಳ್ಳರ ತಂಡ ಈ ಕೃತ್ಯ ನಡೆಸಿದೆ ಎನ್ನಲಾಗಿದೆ.ಈ ಸಂಬಂಧ ಕಡಬ,ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.