LATEST NEWS
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ – ಯುವಕನ ವಿರುದ್ದ ಕೇಸ್

ಮಂಗಳೂರು : ಸೋಶಿಯಲ್ ಮಿಡಿಯಾದಲ್ಲಿ ಪರೋಕ್ಷವಾಗಿ ಮುಸ್ಲಿಮರ ಹತ್ಯಾಕಾಂಡಕ್ಕೆ ಕರೆ ನೀಡಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ ಫೆಡರಲ್ ಬ್ಯಾಂಕ್ ಅಧಿಕಾರಿ ಎಂದು ಹೇಳಿರುವ ವ್ಯಕ್ತಿಯ ವಿರುದ್ಧ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೋಸ್ಟ್ ಹಾಕಿರುವ ವ್ಯಕ್ತಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂದು ಗುರುತಿಸಲಾಗಿದ್ದು, ಅವರು ಎಂಬ ವ್ಯಕ್ತಿ ಇತ್ತೀಚೆಗೆ ವಿಟ್ಲದಲ್ಲಿ ವಿವಾಹ ಸಂಬಂಧಿತ ಕಾರ್ಯಕ್ರಮವೊಂದರಲ್ಲಿ ಕೊರಗಜ್ಜ ದೇವರ ಅನುಕರಣೆ ಆರೋಪದ ವಿವಾದದ ಕುರಿತು ಪ್ರತಿಕ್ರಿಯಿಸುವಾಗ “ಗುಜರಾತ್ ನಲ್ಲಿ ಕೊನೆಯ ಗಲಭೆ ಯಾವಾಗ ಸಂಭವಿಸಿತು ಎಂದು ನಿಮಗೆ ನೆನಪಿಲ್ಲವೇ? ಎಂದು ಪ್ರಶ್ನಿಸಿದ್ದರು.

ವಿಷ್ಣು ಪ್ರಸಾದ್ ನಿಡ್ಡಾಜೆ ಅವರು ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಫೆಡರಲ್ ಬ್ಯಾಂಕ್‌ನಲ್ಲಿ ಬಿಸಿನೆಸ್ ಹೆಡ್ ಎಂದು ಹೇಳಿಕೊಂಡಿದ್ದಾರೆ. ಕೊರಗಜ್ಜ ದೇವರಿಗೆ ಹೋಲುವ ಉಡುಪನ್ನು ತೊಟ್ಟಿದ್ದ ವರನ ಕಾರು, ಅಂಗಡಿ, ಮನೆ ಸುಟ್ಟು ಹಾಕುವಂತೆಯೂ ಅವರು ಕರೆ ನೀಡಿದ್ದರು.
ವಿಷ್ಣು ಪ್ರಸಾದ್ ಅವರ ‘ಜನಾಂಗೀಯ ಹತ್ಯೆ’ ಕರೆ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ) ಕಾರ್ಯಕರ್ತರು ವಿಟ್ಲ ಪೊಲೀಸರಿಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ವಿಷ್ಣುಪ್ರಸಾದ್ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಆರೋಪಿಯ ವಿರುದ್ಧ ಸೆಕ್ಷನ್ 505 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವಿಷ್ಣುಪ್ರಸಾದ್ ಅವರೇ ಆ ಪೋಸ್ಟ್‌ಗಳನ್ನು ಮಾಡಿದ್ದಾರೆಯೇ ಅಥವಾ ನಕಲಿ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.