LATEST NEWS
ಸಾಮಾಜಿಕ ಹೋರಾಟಗಾರ ಜಿ. ರಾಜಶೇಖರ್ ನಿಧನ

ಉಡುಪಿ ಜುಲೈ 21: ಹಿರಿಯ ಚಿಂತಕ ವಿಮರ್ಶಕ ಹೋರಾಟಗಾರ ಜಿ. ರಾಜಶೇಖರ್ ಅನಾರೋಗ್ಯದಿಂದ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೋಮುವಾದದ ವಿರುದ್ದ ಧ್ವನಿ ಎತ್ತಿ ಅದರ ವಿರುದ್ದ ನಡೆಯುತ್ತಿದ್ದ ಎಲ್ಲಾ ಹೋರಾಟಗಳಲ್ಲಿ ರಾಜಶೇಖರ್ ಮುಂಚೂಣಿಯಲ್ಲಿರುತ್ತಿದ್ದರು. ಅಲ್ಲದೆ ಗಲಭೆಗಳು ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಸತ್ಯಶೋಧನಾ ವರದಿಗಳನ್ನು ಬರೆಯುತ್ತಿದ್ದರು. ಅತ್ಯಂತ ನೇರ, ನಿಷ್ಠುರ ಮಾತುಗಳು ಹಾಗು ವಿಶ್ಲೇಷಣೆಗಳಿಗೆ ಅವರು ಖ್ಯಾತಿ ಪಡೆದಿದ್ದರು. ವಿಶೇಷವಾಗಿ ಕರಾವಳಿ ಜಿಲ್ಲೆಗಳ ಜನಪರ ಹೋರಾಟಗಳು ಹಾಗು ಹೋರಾಟಗಾರರ ಪಾಲಿನ ಅತ್ಯಂತ ಆಪ್ತ ಸ್ನೇಹಿತ ಹಾಗು ಮಾರ್ಗದರ್ಶಕರಾಗಿದ್ದರು ಜಿ. ರಾಜಶೇಖರ್.

2019ರಿಂದ ಪಾರ್ಕಿಂಸನ್ ಪ್ಲಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಇವರು, ಶ್ವಾಸಕೋಸದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ತೀರಾ ಗಂಭೀರ ಸ್ಥಿತಿಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.