DAKSHINA KANNADA
ಸೋಶಿಯಲ್ ಮಿಡಿಯಾದಲ್ಲಿ ಕೋಮು ಪ್ರಚೋದಕ ಸಂದೇಶ – ಗೃಹರಕ್ಷಕದಳದ ಸಿಬ್ಬಂದಿ ಅಮಾನತು
ಪುತ್ತೂರು ಎಪ್ರಿಲ್ 27: ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕ ಶಾಂತಿ ಕದಡುವ ಸಂದೇಶ ರವಾನೆ ಮಾಡಿದ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗೃಹರಕ್ಷಕದಳದ ಸಿಬ್ಬಂದಿಯೊಬ್ಬರನ್ನು ಗೃಹರಕ್ಷಕ ಇಲಾಖೆ ಅಮಾನತು ಮಾಡಿದೆ.
ಪುತ್ತೂರು ಆರ್‌ಟಿಒದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕ ದಳದ ಸಿಬ್ಬಂದಿ ಸಲಾವುದ್ದೀನ್ ನೌಶಾದ್ ಎಂಬವರನ್ನು ಅಮಾನತುಗೊಂಡವರು. ವಾಟ್ಸಪ್‌ನಲ್ಲಿ ಬಂದಿರುವ ಸಾರ್ವಜನಿಕ ಶಾಂತಿ ಕದಡುವ ರೀತಿಯಲ್ಲಿ ಸಂದೇಶವನ್ನು ರವಾನೆ ಮಾಡಿದ ಹಿನ್ನೆಲೆಯಲ್ಲಿ ಆತನ ವಿರುದ್ದ ದೂರುಗಳು ಬಂದಿತ್ತು. ಶಾಸಕ ಸಂಜೀವ ಮಠಂದೂರು ಅವರ ಸೂಚನೆಯಂತೆ ಗೃಹರಕ್ಷಕದಳದ ಕಮಾಡೆಂಡ್ ಡಾ. ಮುರಳೀಧರ ಚೂಂತಾರು ಅವರು ಸಲಾವುದ್ದೀನ್ ನೌಶಾದ್ ಅವರನ್ನು ಅಮಾನತಿನಲ್ಲಿಟ್ಟು ಆತನನ್ನು ವಿಚಾರಿಸಿ ವರದಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.