LATEST NEWS
ಯಶ್ಪಾಲ್ ಸುವರ್ಣಾ ಗೆ ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಿದ ಆರೋಪಿ ಆರೆಸ್ಟ್
ಉಡುಪಿ : ಬಿಜೆಪಿ ನಾಯಕ ಉಡುಪಿಯ ಯಶ್ಪಾಲ್ ಸುವರ್ಣಾ ಗೆ ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಹಾಕಿದ ಆರೋಪಿಯನ್ನು ಉಡುಪಿ ಕಾಪು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಶಫಿ ಬಂಧಿತ ಆರೋಪಿಯಾಗಿದ್ದಾನೆ. ಮಾರಿ ಗುಡಿ ಪೇಜ್ ಮೂಲಕ ಇನ್ಸ್ಟಾಗ್ರಾಮ್ ನಲ್ಲಿ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಯಶ್ಪಾಲ್ ಸುವರ್ಣ ರಿಗೆ ಶಫಿ ಜೀವ ಬೆದಿಕೆ ಹಾಕಿದ್ದ. ಇದೀಗ ಉಡುಪಿ ಪೊಲೀಸರು ಪೇಜ್ ಮೂಲಕ ಬೆದರಿಕೆ ಹಾಕಿದ್ದ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ. ಮಂಗಳೂರಿನ ಸುರತ್ಕಲ್ ನಲ್ಲಿ ಶಫಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನದ ವಶದಲ್ಲಿದ್ದಾರೆ. ಐಪಿ ವಿಳಾಸದ ಮೂಲಕ ಆರೋಪಿ ಶಫಿಯನ್ನು ಉಡುಪಿ ಕಾಪು ಪೊಲೀಸರು ಬಂಧಿಸದ್ದಾರೆ. ಶಫಿ ಮೂಲತಃ ಮಂಗಳೂರಿನ ಬಜ್ಪೆಯವನಾಗಿದ್ದು ಸುರತ್ಕಲ್ ಭಾಗದಲ್ಲಿ ಲಾಜಿಸ್ಡಿಕ್ ನಲ್ಲಿ ಲಾರಿಗಳ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ವಿವಾದಿತ ಮಳಲಿ ಮಸಿದಿ ವಿಚಾರಲ್ಲಿ ಯಶ್ಪಾಲ್ ಸುವರ್ಣ ಅವರನ್ನು ಟಾರ್ಗೆಟ್ ಮಾಡಿರುವುದಾಗಿ ಮಹಮ್ಮದ್ ಶಫಿ ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ. ಮಹಮ್ಮದ್ ಶಫಿ ಬಂಧನದ ಬಳಿಕ ಇನ್ಸ್ಟಾಗ್ರಾಮ್ ನ ಮಾರಿಗುಡಿ ಪೇಜ್ ನಲ್ಲಿರುವ ಎಲ್ಲಾ ಪೋಸ್ಟ್ ಡಿಲಿಟ್ ಮಾಡಲಾಗಿದೆ.. ಈತನ ಜೊತೆಗೆ ಕೈಜೋಡಿಸಿರುವ ಮಹಮ್ಮದ್ ಆಸಿಫ್ ಎಂಬವನಿಗೂ ಪೊಲೀಸರು ಬಲೆ ಬೀಸಿದ್ದಾರೆ. ಮಹಮ್ಮದ್ ಆಸೀಫ್ ಆಲಿಯಾಸ್ ಆಶಿಕ್ ದುಬೈ ನಲ್ಲಿ ನೆಲೆಸಿದ್ದಾನೆ. ಈತನ ಬಂಧನಕ್ಕೂ ಬೇಕಾದ ಪ್ರಕ್ರೀಯೆಗಳನ್ನು ಆರಂಭಿಸಲಾಗಿದೆ ಎಂದು ಉಡುಪಿ ಎಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ ಮಾಹಿತಿ ನೀಡಿದ್ದಾರೆ