LATEST NEWS
ಗರ್ಭಿಣಿಯರಿಗೆ ಅವಹೇಳನ – ಸಾಮಾಜಿಕ ಕಾರ್ಯಕರ್ತ ಅರೆಸ್ಟ್…!!
ಮಂಗಳೂರು ಅಕ್ಟೋಬರ್ 08: ನಮೀಬಿಯಾದಿಂದ ಭಾರತಕ್ಕೆ ಬಂದಿರುವ ಚೀತಾ ಗರ್ಭಿಣಿ ಎಂಬ ಸುದ್ದಿಗೆ ಗರ್ಭಿಣಿ ಮಹಿಳೆಯೊಬ್ಬರ ಪೋಟೋವನ್ನು ಪೋಟೋಶಾಫ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.
ಇವರು ತಮ್ಮ ಫೇಸ್ ಖಾತೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರ ದೇಹಕ್ಕೆ ಚಿರತೆಯ ತಲೆ ಅಂಟಿಸಿದ ಚಿತ್ರವನ್ನು ‘ನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು. ಇದು ಗರ್ಭಿಣಿ ಮತ್ತು ಭಾರತೀಯ ಸಂಸ್ಕೃತಿಗೆ ಮಾಡಿರುವ ಅವಹೇಳನ ಎಂದು ಆರೋಪಿಸಿ ಎಡಪದವು ಗ್ರಾಮದ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ‘ಮಹಿಳೆ ಒಬ್ಬರು ನೀಡಿದ ದೂರಿನ ಆಧಾರದಲ್ಲಿ ಸುನಿಲ್ ಬಜಿಲಕೇರಿ ಅವರನ್ನು ಬಂಧಿಸಲಾಗಿತ್ತು ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ’ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ತಿಳಿಸಿದ್ದಾರೆ.