DAKSHINA KANNADA
ಪುತ್ತೂರು – ಸ್ವಿಮ್ಮಿಂಗ್ ಫೂಲ್ ನಲ್ಲಿ ನಾಗರಹಾವು…!!

ಪುತ್ತೂರು ನವೆಂಬರ್ 06: ಮನೆಯೊಂದರ ಈಜುಕೊಳದಲ್ಲಿ ಬೃಹತ್ ಗಾತ್ರದ ನಾಗರಹಾವೊಂದು ಸಿಕ್ಕಿಬಿದ್ದ ಘಟನೆ ಪುತ್ತೂರಿನ ದರ್ಬೆ ಎಂಬಲ್ಲಿ ನಡೆದಿದೆ.
ದರ್ಬೆ ನಿವಾಸಿ ಕುಶಾಲಪ್ಪ ಅಭಿಕಾರ್ ಎಂಬವರ ಮನೆಯ ಈಜುಕೊಳದಲ್ಲಿ ಈ ನಾಗರಹಾವು ಪತ್ತೆಯಾಗಿದೆ. ಭಾರೀ ಗಾತ್ರದ ನಾಗರಹಾವನ್ನು ಕಂಡು ಬೆಚ್ಚಿದ ಮನೆ ಮಂದಿ ಉರಗತಜ್ಞ ತೇಜಸ್ ಬನ್ನೂರು ಗೆ ಹಾವಿನ ಕುರಿತು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತೇಜಸ್ ಭಾರೀ ಗಾತ್ರದ ನಾಗರಹಾವನ್ನು ರಕ್ಷಿಸಿದ್ದು, ಹಾವನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟಿದ್ದಾರೆ.
