Connect with us

DAKSHINA KANNADA

ಸಿಂಗಾರಿ ಬೀಡಿ ಮಾಲೀಕರ ಮನೆ ದರೋಡೆ ಪ್ರಕರಣ – ಪೊಲೀಸ್ ಇಲಾಖೆ ತನಿಖೆ ಏನಾಯ್ತು..?

ವಿಟ್ಲ ಫೆಬ್ರವರಿ 03: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಸಿಂಗಾರಿ ಬೀಡಿ ಮಾಲಕನ ಮನೆ ದರೋಡೆ ಪ್ರಕರಣ ತನಿಖೆ ಠುಸ್…ತನಿಖೆಯ ಹಿಂದಿನ ರಹಸ್ಯದ ಸ್ಟೋರಿ ಇಲ್ಲಿದೆ…


ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಾರೀ ಸುದ್ಧಿ ಮಾಡಿದ್ದ ಬೀಡಿ ಉದ್ಯಮಿಯ ಮನೆಯ ದರೋಡೆ ಪ್ರಕರಣ ಸದ್ದಿಲ್ಲದೆ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ಜನವರಿ 3 ರಂದು ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರಿನ‌ ನಾರ್ಶದ ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಎಂಬ ಉದ್ಯಮಿಯ ಮನೆಗೆ ಇಡಿ ಅಧಿಕಾರಿಗಳ ಸೋಗಿನಲ್ಲಿ ನುಗ್ಗಿ ಕೋಟ್ಯಂತರ ಹಣ ಲಪಟಾಯಿಸಲಾಗಿತ್ತು. 5 ಮಂದಿಯ ತಂಡ ಈ ಕೃತ್ಯ ನಡೆಸಿದ್ದು, ಈ ಪ್ರಕರಣ ಇಡೀ ದಕ್ಷಿಣಕನ್ನಡ ಜಿಲ್ಲೆಯ ಜನತೆಯನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಸಿನಿಮಾ ದಲ್ಲಿ ಯಾವ ರೀತಿ ನಡೆಯುತ್ತದೋ, ಅದೇ ಮಾದರಿಯಲ್ಲಿ ಈ ದರೋಡೆ ನಡೆಸಲಾಗಿತ್ತು. ದರೋಡೆಗೆ ಸಂಬಂಧಿಸಿದಂತೆ ಸುಲೈಮಾನ್ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು,ಸುಮಾರು 39 ಲಕ್ಷ ರೂಪಾಯಿ ದರೋಡೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಆದರೆ ಮನೆಯಿಂದ ಕೋಟ್ಯಂತರ ರೂಪಾಯಿ ಹಾರ್ಡ್ ಕ್ಯಾಶನ್ನು ನಕಲಿ ಇಡಿ ಅಧಿಕಾರಿಗಳು ಲಪಟಾಯಿಸಿದ್ದರು ಎಂಬ ಮಾತು ಕೇಳಿ ಬಂದಿತ್ತು.


ಪ್ರಕರಣ ಸಂಭವಿಸಿದ ದಿನವೇ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಎಲ್ಲಾ ಹಿರಿಯ ಕಿರಿಯ ಅಧಿಕಾರಿಗಳು ಈ ಮನೆಗೆ ಭೇಟಿ ನೀಡಿ‌ ಪರಿಶೀಲನೆ ನಡೆಸಿದ್ದರು. ದರೋಡೆಕೋರರನ್ನು ಕೂಡಲೇ ಬಂಧಿಸಬೇಕೆಂದು ಸ್ವತಹ ಸ್ಪೀಕರ್‌ ಯು.ಟಿ.ಖಾದರ್, ಮಾಜಿ ಸಚಿವ ರಮಾನಾಥ ರೈ ಸೇರಿದಂತೆ ಹಲವು ಮುಖಂಡರು ಸಿಂಗಾರಿ ಬೀಡಿ ಮಾಲಕನ ಮನೆಗೆ ಭೇಟಿ‌ ನೀಡಿ ಪೋಲೀಸ್ ಇಲಾಖೆಯನ್ನು ಆಗ್ರಹಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಪೋಲೀಸರು ನಾಲ್ಕು ತಂಡಗಳನ್ನು ರಚಿಸಿ ಕೊನೆಗೆ ಓರ್ವ ಕೇರಳದ ಕೊಲ್ಲಂ ನಿವಾಸಿ ಅನಿಲ್ ಫರ್ನಾಂಡೀಸ್ ಎಂಬಾತನನ್ನು ಬಂಧಿಸಿ ಆತನಿಂದ ಕೃತ್ಯಕ್ಕೆ ಬಳಸಿದ ಎರ್ಟಿಗಾ ಕಾರು ಮತ್ತು 5 ಲಕ್ಷ ರೂಪಾಯಿಯನ್ನು ವಶಪಡಿಸಿಕೊಂಡಿದ್ದರು. ಆದರೆ ಕೃತ್ಯದಲ್ಲಿ ಭಾಗವಹಿಸಿದ ಇನ್ನುಳಿದ ಆರೋಪಿಗಳು ಮತ್ತು ಕೃತ್ಯಕ್ಕೆ ಸಹಕಾರ ನೀಡಿದವರನ್ನು ಈವರೆಗೂ ಬಂಧಿಸಲು ವಿಫಲವಾಗಿದೆ.
ಇನ್ನೊಂದೆಡೆ ಮಂಗಳೂರಿನಲ್ಲಿ ಕೋಟಾಕಾರು ಬ್ಯಾಂಕ್ ದರೋಡೆ ಮಾಡಿದ ಆರೋಪಿಗಳನ್ನು ಪೊಲೀಸರು ನಿದ್ರೆ ಬಿಟ್ಟು ಕೇವಲ ನಾಲ್ಕೆ ದಿನಗಳಲ್ಲಿ ಪತ್ತೆ ಹಚ್ಚಿ ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ದರೋಡೆಯಾದ ಎಲ್ಲಾ ವಸ್ತುಗಳನ್ನು ಮರಳ ಪಡೆದಿದ್ದಾರೆ. ಅಲ್ಲದೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದ ಇಬ್ಬರು ದರೋಡೆಕೋರರಿಗೆ ಗುಂಡಿನ ರುಚಿ ತೋರಿಸಿದ್ದಾರೆ.


ಆದರೆ ಸಿಂಗಾರಿ ಬಿಡಿ ಮಾಲೀಕರ ಮನೆ ದರೋಡೆಯಲ್ಲಿ ಪೊಲೀಸರು ಮಾತ್ರ ಇದೊಂದು ಸಣ್ಣ ಪ್ರಕರಣ ಎಂಬ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಓರ್ವನ ಅರೆಸ್ಟ್ ಮಾಡಿ ಸಣ್ಣ ಕಳ್ಳತನ ರೀತಿಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಅರೆಸ್ಟ್ ತೋರಿಸಿದ್ದಾರೆ. ಆದರೆ ಪ್ರಕರಣ ನಡೆದ ಪರಿಸರದಲ್ಲಿ ಮಾತ್ರ ಜನ ಬೇರೆಯದೆ ಗಾಸಿಫ್ ನಲ್ಲಿದ್ದಾರೆ. ದರೋಡೆ ಪ್ರಕರಣದಲ್ಲಿ ಹೋಗಿರುವ ಹಣ ಎಷ್ಟು ಎನ್ನುವ ಮಾಹಿತಿ ಸರಿಯಾಗ ಇಲ್ಲ. ಅಲ್ಲದೆ ಬಂಧಿತನಿಂದ ಕೇವಲ 5 ಲಕ್ಷ ಹಣ ಸಿಕ್ಕಿದೆ. ದರೋಡೆಕೋರರ ಪ್ಲ್ಯಾನ್ ಏನಿತ್ತು ಅನ್ನೊದನ್ನು ಯಾರೂ ಬಾಯಿಬಿಟ್ಟಿಲ್ಲ. ಸ್ಥಳೀಯರ ಗಾಸೀಫ್ ಗಳಿಗೂ ಪೊಲೀಸರ ತನಿಖೆಯ ರೀತಿಗೂ ಒಂದು ರೀತಿಯ ಲಿಂಕ್ ಇದೆ ಎಂದು ಅನ್ನಿಸತೊಡಗಿದೆ.


ಜಿಲ್ಲೆಯಲ್ಲಿ ಎರಡು ಭಿನ್ನ ದರೋಡೆ ಪ್ರಕರಣದಲ್ಲಿ ಪೊಲೀಸರ ಕಾರ್ಯವೈಖರಿ ಎದ್ದು ಕಾಣಿಸುತ್ತಿದೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಪ್ರಕರಣ ತನಿಖೆ ನಡೆಸಿದ ರೀತಿಗೂ ನಾರ್ಶಾದ ದರೋಡೆ ಪ್ರಕರಣದಲ್ಲಿ ಜಿಲ್ಲಾ ಪೊಲೀಸರ ತನಿಖೆ ರೀತಿಗೂ ಅಜಗಜಾಂತರ ವ್ಯತ್ಯಾಸ ಇದೆ.


ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳು ಹಾಯಾಗಿ ಮೇಯಲು ಬಿಡಲಾಗಿದೆ ಎನ್ನವು ಆರೋಪ ಕೇಳಿ ಬಂದಿದೆ. ಇಲ್ಲದೇ ಹೋದಲ್ಲಿ ಒಬ್ಬ ಆರೋಪಿಯನ್ನು ಹಿಡಿದ ಪೋಲೀಸರಿಗೆ ಮಿಕ್ಕುಳಿದ ಆರೋಪಿಗಳನ್ನು ಹಿಡಿಯೋದು ಬಾಳೆ ಸಿಪ್ಪೆ ಸುರಿದಷ್ಟೇ ಸುಲಭ ಅನ್ನೋದು ಎಲ್ಲರಿಗೂ ತಿಳಿದ ವಿಚಾರವೇ. ಅದಕ್ಕೆ ಪೂರಕವಾಗಿ ಕೋಟೆಕಾರ್ ಬ್ಯಾಂಕ್ ದೋರಡೆ ಪ್ರಕರಣ ಇದೆ. ಒಟ್ಟಾರೆಯಾಗಿ ಸಿಂಗಾರಿ ಬೀಡಿ ಮಾಲೀಕನ ಮನೆ ದರೋಡೆ ಪ್ರಕರಣ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ಕಾರ್ಯವೈಖರಿ ಮೇಲೆ ಜನರಲ್ಲಿ ಸಂಶಯ ಮೂಡಿಸುವಂತೆ ಮಾಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *