FILM
ಖ್ಯಾತ ಆರ್ ಜೆ ಸಿರ್ಮಾನ್ ಸಿಂಗ್ ಆತ್ಮಹತ್ಯೆಗೆ ಶರಣು
ಗುರುಗ್ರಾಮ ಡಿಸೆಂಬರ್ 26: ಖ್ಯಾತ ಆರ್ ಜೆ ಸಿರ್ಮಾನ್ ಸಿಂಗ್ ತಮ್ಮ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಗುರುಗ್ರಾಮದ ಸೆಕ್ಟರ್ 47 ರಲ್ಲಿನ ತನ್ನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಇವರು ಆರ್ಜೆ ಸಿಮ್ರನ್ ಎಂದೇ ಜನಪ್ರಿಯರಾಗಿದ್ದ. 25 ವರ್ಷದ ಸಿಮ್ರನ್ ಸಿಂಗ್, ಡಿಸೆಂಬರ್ 13ರಂದು ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಕೊನೆಯ ರೀಲ್ ಪೊಸ್ಟ್ ಮಾಡಿದ್ದರು.
ಗುರುಗ್ರಾಮ್ ಸೆಕ್ಟರ್ 47 ಅಪಾರ್ಟ್‌ಮೆಂಟ್‌ನಲ್ಲಿ ಆಕೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಆಕೆಯೊಂದಿಗೆ ವಾಸವಿದ್ದ ಸ್ನೇಹಿತ ಪೊಲೀಸರಿಗೆ ಕರೆ ಮಾಡಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದು, ಆಕೆಯ ಕುಟುಂಬದವರು ಯಾವುದೇ ದೂರು ದಾಖಲಿಸಿಲ್ಲ. ಸಿಮ್ರಾನ್ ಕೆಲಕಾಲ ಮನನೊಂದಿದ್ದು, ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆಕೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ.