Connect with us

DAKSHINA KANNADA

ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬೆಳ್ಳಿ ಪಲ್ಲಕಿ ಸಮರ್ಪಣೆ .!

ಮಂಗಳೂರು :  ಶ್ರೀ ಕಾಶೀ ಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ  ಶ್ರೀ ರಾಮ ಮಂದಿರಕ್ಕೆ ಬೆಳ್ಳಿ ಪಲ್ಲಕಿ ಸಮರ್ಪಣೆ ಮಾಡಿದ್ದಾರೆ.

ಅದರ ಪೂರ್ವಭಾವಿಯಾಗಿ ಶನಿವಾರದಂದು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ನೂತನ ಬೆಳ್ಳಿ ಪಲ್ಲಕಿಯ ಪುರ ಪ್ರವೇಶ ಕಾರ್ಯಕ್ರಮ ನಡೆಯಿತು . ಆ ಪ್ರಯುಕ್ತ ಪಲ್ಲಕಿಯ ಮೆರವಣಿಗೆಯು ಶ್ರೀ ದೇವಳದ ಬಳಿಯಿಂದ ಸಾಯಂಕಾಲ 6 : 00 ಗಂಟೆಗೆ ಹೊರಟು ಮಹಾಮಾಯ ದೇವಸ್ಥಾನ , ಡೊಂಗರಕೇರಿ , ಚಿತ್ರಾ ಜಂಕ್ಷನ್ ಬಳಿಯಿಂದ ಎಡಕ್ಕೆ ತಿರುಗಿ ಬಳಿಕ ಸ್ವದೇಶೀ ಸ್ಟೋರ್ಸ್ ಮೂಲಕ ರಥಬೀದಿ ಮೂಲಕ ಸುಮಾರು 7 00 ಗಂಟೆಗೆ ಸರಿಯಾಗಿ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಆಗಮನದ ಬಳಿಕ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಸಕಲ ಬಿರುದಾವಳಿ ಗಳೊಂದಿಗೆ ಭವ್ಯ ಶೋಭಾ ಯಾತ್ರೆ ನಡೆಯಿತು .

 

ದೇವಳಕ್ಕೆ ತಲುಪಿದ ತದನಂತರ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ದೇವರ ರಾತ್ರಿ ಪೂಜೆ ಬಳಿಕ ಶ್ರೀ ವೆಂಕಟರಮಣ ದೇವಳದ ಶ್ರೀ ದೇವರ ಉತ್ಸವಕ್ಕಾಗಿ ನೂತನವಾಗಿ ನಿರ್ಮಿಸಲಾದ ಸ್ವರ್ಣ ಲಾಲ್ಕಿ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ಸಭಾಕಾರ್ಯಕ್ರಮ ನಡೆಯಿತು . ಈ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ , ಕಿರಣ್ ಪೈ , ಸತೀಶ್ ಪ್ರಭು , ಗಣೇಶ್ ಕಾಮತ್ , ಜಗನ್ನಾಥ್ ಕಾಮತ್ , ಉದ್ಯಮಿ ಪಿ . ದಯಾನಂದ ಪೈ ಹಾಗೂ ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು .

Share Information
Continue Reading
Advertisement
Click to comment

Leave a Reply

Your email address will not be published. Required fields are marked *