LATEST NEWS
ಸಿಕ್ಕಿಂ – ಮೇಘಸ್ಪೋಟಕ್ಕೆ 23 ಮಂದಿ ಸೈನಿಕರು ನಾಪತ್ತೆ….!!
ಸಿಕ್ಕಿಂ ಅಕ್ಟೋಬರ್ 04 : ಮೇಘ ಸ್ಪೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹಕ್ಕೆ ವೆಂಟಿಮೂರು ಸೇನಾ ಸಿಬ್ಬಂದಿ ನಾಪತ್ತೆಯಾದ ಘಟನೆ ಉತ್ತರ ಸಿಕ್ಕಿಂನ ಲೊನಾಕ್ ಸರೋವರದಲ್ಲಿ ನಡೆದಿದೆ.
ಉತ್ತರ ಸಿಕ್ಕಿಂನಲ್ಲಿ ನಡೆದ ಮೇಘಸ್ಫೋಟದಿಂದಾಗಿ ಪ್ರವಾಹ ಪರಿಸ್ಥಿತಿ ಸಂಭವಿಸಿದ್ದು, 23 ಮಂದಿ ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಅನೇಕ ಪ್ರದೇಶಗಳು ಜಲಾವೃತವಾಗಿವೆ, ಪ್ರವಾಹದ ನಂತರ ಚುಂಗ್‌ಥಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿದ್ದರಿಂದ ಕೆಳಭಾಗದ ಪ್ರದೇಶಗಳಲ್ಲಿ ನೀರಿನ ಮಟ್ಟ ಇದ್ದಕ್ಕಿದ್ದಂತೆ 15-20 ಅಡಿ ಎತ್ತರಕ್ಕೆ ಏರಿದೆ ಎಂದು ವರದಿಯಾಗಿದೆ.
ಸಿಂಘ್‌ಥಾಮ್ ಬಳಿಯ ಬರ್ದಂಗ್‌ನಲ್ಲಿ ನಿಲ್ಲಿಸಲಾಗಿದ್ದ ಸೇನಾ ವಾಹನಗಳು ಮುಳುಗಿವೆ. ಇದಲ್ಲದೇ 23 ಸೇನಾ ಸಿಬ್ಬಂದಿಯೂ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ನದಿ ಉಕ್ಕಿ ಹರಿಯುತ್ತಿರುವ ಕಾರಣ ತೀಸ್ತಾ ನದಿಯ ಮೇಲಿನ ಸಿಂಥಮ್ ಕಾಲು ಸೇತುವೆ ಕುಸಿದಿದೆ. ಪಶ್ಚಿಮ ಬಂಗಾಳದ ಜಲ್ಪೈಗುರಿ ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ನದಿಯ ಕೆಳಗಿನ ಜಲಾನಯನ ಪ್ರದೇಶದಿಂದ ಜನರನ್ನು ಸ್ಥಳಾಂತರಿಸುತ್ತಿದೆ. ಸಿಕ್ಕಿಂ ಸರ್ಕಾರ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಿದೆ. ತೀಸ್ತಾ ನದಿಯಿಂದ ದೂರ ಇರುವಂತೆ ಜನರಿಗೆ ತಿಳಿಸಲಾಗಿದೆ. ಇನ್ನೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.