DAKSHINA KANNADA
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ – ಎಂ.ಸಿ. ವೇಣುಗೋಪಾಲ್

ಮಂಗಳೂರು ಜುಲೈ 26: ಸಿಎಂ ಡಿಸಿಎಂ ನಡುವೆ ಅನೊನ್ಯತೆ ಇಲ್ಲ ಎಂದು ಬಿಜೆಪಿಯವರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕೆಪಿಸಿಸಿ ಉಪಾಧ್ಯಕ್ಷ ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಸ್ತುವಾರಿಯಾದ ಎಂ.ಸಿ. ವೇಣುಗೋಪಾಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರದಲ್ಲಿ ಅಧಿಕಾರದ ಬಗ್ಗೆ ತೀರ್ಮಾನವನ್ನು ಹೈಕೊಳ್ಳುವುದು ಹೈ ಕಮಾಂಡ್ ಅದು ರಾಜ್ಯ ಮಟ್ಟದಲ್ಲಾಗಲಿ , ಜಿಲ್ಲಾ ಮಟ್ಟದಲ್ಲಿ ತೀರ್ಮಾನಕ್ಕೆ ಯಾವುದೇ ಅವಕಾಶ ಇರುವುದುದಿಲ್ಲ . ವಿರೋಧ ಪಕ್ಷ ಬಿಜೆಪಿ ಕಾಂಗ್ರೆಸ್ ಅಧಿಕಾರವನ್ನು ಟೀಕೆ ಮಾಡುವುದು ಸಾಮಾನ್ಯವಾಗಿದೆ . ಮುಖ್ಯ ಮಂತ್ರಿಗಳು ಮತ್ತು ಉಪ ಮುಖ್ಯ ಮಂತ್ರಿಗಳ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ . ಸುಳ್ಳನ್ನು ಹೇಳುವುದು ಬಿಜೆಪಿ ಸಕಾರದ ಹುನ್ನಾರ ಎಂದು ಅವರು ಕಿಡಿಕಾರಿದರು .

ಕಡಬ ಬ್ಲಾಕ್ ಪಂಚಾಯತ್ ನಲ್ಲಿ ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯತ್ ಚುನಾವಣೆ ನಡೆಯಲಿದ್ದು , ಅದಕ್ಕೆ ಪೂರ್ವಭಾವಿಯಾಗಿ ಮಾಜಿ ಸಚಿವರು ಹಾಲಿ ಸಚಿವರ ನೇತೃತ್ವದಲ್ಲಿ ಪೂರ್ವ ತಯಾರಿಯನ್ನು ಮಾಡಿಕೊಳ್ಳಲಾಗುತ್ತಿದೆ, ಪಟ್ಟಣ ಪಂಚಾಯತ್ ಚುನಾವಣೆಯು ಮುಂದಿನ ತಿಂಗಳ 17 ನೇ ತಾರೀಕಿನಂದು ನಡೆಯಲಿದೆ . 5 ನೇ ತಾರೀಖಿನ ಒಳಗಾಗಿ ನಾಮ ಪತ್ರ ಸಲ್ಲಿಕೆ ಆಗಲಿದೆ . ಆ ಭಾಗದಲ್ಲಿ 13 ವಾರ್ಡ್ ಗಳಿವೆ ಅಲ್ಲಿ ಚುನಾವಣೆ ನಡೆಯಲಿದೆ . ಈ ಭಾರಿ ವಾರ್ಡ್ ಗಳಲ್ಲಿ ಚುನಾವಣೆ ಗೆಲ್ಲುವ ಮುಖಾಂತರ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲಾಗುತ್ತದೆ . ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು , ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಚುನಾವಣೆಯ ಪೂರ್ವ ತಯಾರಿ ನಡೆದಿದೆ . ಈ ದಿನದಿಂದಲೇ ಲೋಕ ಸಭೆಯ ಚುನಾವಣೆಗೆ ಸಿದ್ಧತೆ ಆರಂಭವಾಗಲಿದೆ . ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೇಸ್ ಗೆಲುವು ಸಾಧಿಸುವ ಮೂಲಕ ಪಕ್ಷ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ , ರಾಜ್ಯ ಗೇರು ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ ,ಕಾಂಗ್ರೆಸ್ ಮಹಿಳಾ ಘಟಕದ ಗ್ರಾಮಾಂತರ ಅಧ್ಯಕ್ಷೆ ಉಷಾ ಅಂಚನ್ , ಮನೋಜ್ ಮುಂತಾದವರು ಉಪಸ್ಥಿತರಿದ್ದರು .