DAKSHINA KANNADA
ಶ್ಯಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಕೇಸ್ ಸಂಕಷ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್
ಶ್ಯಾಂಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಕೇಸ್ ಸಂಕಷ್ಟದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್
ಪುತ್ತೂರು ಅಕ್ಟೋಬರ್ 24: ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‍ಗೆ ಅವರಿಗೆ ಸಂಕಷ್ಟ ಎದುರಾಗಿದ್ದು, ಆತ್ಮಹತ್ಯೆಗೆ ಪ್ರೇರಣಿ ನೀಡಿರುವ ಆಡಿಯೋದ ಧ್ವನಿ ಕಲ್ಲಡ್ಕ ಪ್ರಭಾಕರ್ ಭಟ್ ಅವರದ್ದೇ ಎಂದು ದೃಢಪಟ್ಟಿದೆ.
ಕೆದಿಲ ಶ್ಯಾಮಪ್ರಸಾದ್ ಶಾಸ್ತ್ರಿ 2014ರ ಆ.31ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ತನಿಖೆ ನಡೆಸಿದ್ದ ಸಿಐಡಿ ಆತ್ಮಹತ್ಯಗೆ ಕಲ್ಲಡ್ಕ ಪ್ರಭಾಕರ ಭಟ್, ಬೋನಂತಾಯ ಶಿವಶಂಕರ ಭಟ್ ಮತ್ತು ರಾಘವೇಶ್ವರ ಶ್ರೀಗಳ ಪ್ರೇರಣೆ ಇದೆ ಎಂದು ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು.
ಪ್ರಕರಣದ ತನಿಖೆ ನಡೆಸಿರುವ ಸಿಐಡಿ ಅಧಿಕಾರಿಗಳು ದೋಷಾರೋಪಣಾಟ್ಟಿಯಲ್ಲಿ ನಮೂದಿಸಿರುವ ಆಡಿಯೋ ಕಲ್ಲಡ್ಕ ಪ್ರಭಾಕರ ಭಟ್ ಅವರದ್ದೇ ಧ್ವನಿ ಎಂದು ಹೇಳಿದ್ದರು, ಈಗ ವಿಧಿ ವಿಜ್ಞಾನ ಪ್ರಯೋಗಾಲಯ ಕೂಡ ಪ್ರಭಾಕರ ಭಟ್ ಅವರದ್ದೇ ಎಂದು ದೃಢ ಪಡಿಸಿದೆ. ಈ ಮೂಲಕ ಶ್ಯಾಮಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ ಕಲ್ಲಡ್ಕ್ ಪ್ರಭಾಕರ್ ಭಟ್ ಅವರಿಗೆ ಸಂಕಷ್ಟ ಎದುರಾಗಿದೆ.
ಆಡಿಯೋದಲ್ಲಿ ಏನಿದೆ?
ಶ್ಯಾಂಪ್ರಸಾದ್ ಶಾಸ್ತ್ರಿ : ಹರಿ ಓಂ ಡಾಕ್ಟ್ರೇ ನಮಸ್ತೇ
ಪ್ರಭಾಕರ ಭಟ್ : ಹಾ.. ಹೇಳಿ.
ಶ್ಯಾಂಪ್ರಸಾದ್ ಶಾಸ್ತ್ರಿ : ಈಗ ಗಣೇಶಂಗೆ ಸೂತಕ ಇದ್ದು ನೆನಪಿದ್ದಿಲ್ಲೆ. ಒಂಟ್ಟಿಗೆ ಹೋಪ ಎರಡು ಮೂರು ದಿನ ಬಿಟ್ಟು ಅವಂಗೆ ಶುದ್ಧ ಆಗ್ತು ಆಗ ಒಟ್ಟಿಗೆ ಹೋಪ ಹೇಳಿ, ಶಿವಣ್ಣಂಗೆ ಕೇಳಿದೆ ಮತ್ತಾ ಪ್ರಭಾಕರ್ ಭಟ್ರು ಸಿಕ್ಕುತ್ತಾ ಹೇಳಿ ಅದಕ್ಕೆ.
ಪ್ರಭಾಕರ ಭಟ್ : ಈಗ ಆನು ಎಲ್ಲರೊಟ್ಟಿಗೆ ಮಾತ್ನಾಡಿಟ್ಟಿದ್ದ, ನೀನೀಗ ಹೊರಟ್ಟಿದ್ದೆ ಹೋಗು, ಇದು ಬಾರಿ ಸೂಕ್ಷ್ಮ ವಿಷ್ಯ, ಮಕ್ಕಳಾಟ ಮಾಡಲಾಗ, ಅವ ಮಾಡಿ ಆಯ್ತು ಮಕ್ಕಳಾಟಿಕೆ. ಇದು ಬಾರಿ ಸೂಕ್ಷ್ಮ ಸಂಗತಿ. ನಾನು ಎಲ್ರೋಟ್ಟಿಗೆ ಮಾತಾಡಿ ಆಜು. ನೀನು ಹೊರಟು ಹೋಗಕ್ಕೀಗ ಇಲ್ಲದಿದ್ರೆ ಎಂಗಳ ಮರ್ಯಾದೆ ಎಲ್ಲಾ ಹೋಗ್ತು.
ಶ್ಯಾಂಪ್ರಸಾದ್ ಶಾಸ್ತ್ರಿ : ಅಪ್ಪ ಮಾತಾಡಿ ಎಲ್ಲಾ ಆಯ್ತು.
ಪ್ರಭಾಕರ ಭಟ್ : ಅದಕ್ಕೋಸ್ಕರ ನೀನು ಹೋಗು ಏನು ತೊಂದರೆ ಇಲ್ಲೆ. ಇಂದು ನೀನು ಮಾತ್ರ ಹೋಯಕ್ಕು ಇಂದು ನಿಘಂಟು ಮಾಡಿದ ಹೊತ್ತಲ್ಲಿ ನೀನು ಹೋಗಲೇ ಬೇಕು ಯೋಚ್ನೆ ಮಾಡಿದ್ದಿ?
ಶ್ಯಾಂಪ್ರಸಾದ್ ಶಾಸ್ತ್ರಿ : ಈಗ 1, 1:15ಕ್ಕೆ ಹೋಹೋದು ಅಂತ ಯೋಚ್ನೆ ಮಾಡಿದ್ದಿ
ಪ್ರಭಾಕರ ಭಟ್ : ಹಾ. ಸರಿ ಸರಿ ಅವನ್ಹತ್ರ ಹೇಳು. ಇನ್ನೊಮ್ಮೆ ನಾನು ಕರ್ಕೊಂಡು ಹೋಗ್ತೆ ಹೇಳು
ಶ್ಯಾಂಪ್ರಸಾದ್ ಶಾಸ್ತ್ರಿ : ಅಂಬಗ ಹೇಳ್ತೆ. ಈಗ ಹೇಳ್ತಿ
ಪ್ರಭಾಕರ ಭಟ್ : ಹಾಂ. ನೀನು 1:15ಕ್ಕೆ ಹೊರಟಕ್ಕು
ಶ್ಯಾಂಪ್ರಸಾದ್ ಶಾಸ್ತ್ರಿ : ಹೇಳ್ತಾ ಈಗ
ಇದು ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ಶ್ಯಾಂಪ್ರಸಾದ್ ಶಾಸ್ತ್ರಿ ಅವರ ನಡುವೆ ನಡೆದ ಸಂಭಾಷಣೆಯಾಗಿದೆ.
ಈ ಪ್ರಕರಣದ ಆರೋಪಿಯಾಗಿರುವ ಕಲ್ಲಡ್ಕ ಪ್ರಭಾಕರ ಭಟ್‍ಗೆ ಪುತ್ತೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.