DAKSHINA KANNADA
ಆದಾಯವಿದ್ದರೂ ಕಾಮಗಾರಿ ನಡೆಸಲು ಕಾಯಬೇಕಾದ ಸ್ಥಿತಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಆರೋಪ
ಆದಾಯವಿದ್ದರೂ ಕಾಮಗಾರಿ ನಡೆಸಲು ಕಾಯಬೇಕಾದ ಸ್ಥಿತಿ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಮಂಡಳಿ ಆರೋಪ
ಪುತ್ತೂರು ಡಿಸೆಂಬರ್ 21: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ವಾರ್ಷಿಕ 4 ಕೋಟಿ ಆದಾಯ ಬರುತ್ತಿದ್ದರೂ, ದೇವಸ್ಥಾನದ ಕಾಮಗಾರಿ ನಡೆಸಲು ಸರಕಾರ ಅನುಮತಿ ಪಡೆಯಲು ಕಾಯಬೇಕಾದ ಸ್ಥಿತಿ ಇದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಆರೋಪಿಸಿದೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ದಕ್ಷಿಣಕನ್ನಡ ಜಿಲ್ಲೆಯ ಹೆಸರಾಂತ ಶಿವಕ್ಷೇತ್ರವಾದ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇದೇ ಡಿಸೆಂಬರ್ 25 ರಂದು ಮಹಾ ರಂಗಪೂಜೆ ಹಾಗೂ ವಿಶೇಷ ಮೂಡಪ್ಪ ಸೇವೆ ನಡೆಯಲಿದೆ ಎಂದು ತಿಳಿಸಿದೆ.
ಕ್ಷೇತ್ರದ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಈ ರೀತಿಯ ಸೇವೆಯನ್ನು ನಡೆಸಲಾಗುತ್ತಿದ್ದು, ಲೋಕ ಕಲ್ಯಾಣಾರ್ಥವಾಗಿ ಈ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಕ್ಷೇತ್ರಕ್ಕೆ ವಾರ್ಷಿಕ 4 ಕೋಟಿ ಆದಾಯ ಬರುತ್ತಿದ್ದರೂ, ಕ್ಷೇತ್ರಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ಪೂರೈಸುವ ವ್ಯವಸ್ಥೆಗಾಗಿ ಸರಕಾರದ ಅನುಮತಿಗಾಗಿ ಕಾಯಬೇಕಾದ ಸ್ಥಿತಿ ಇರುವುದರಿಂದ ಉದ್ಧೇಶಿತ ಕಾಮಗಾರಿಗಳನ್ನು ನಡೆಸಲು ವಿಳಂಬವಾಗುತ್ತಿದೆ ಎಂದು ಸಮಿತಿ ಇದೇ ಸಂದರ್ಭದಲ್ಲಿ ಆರೋಪಿಸಿದೆ.