LATEST NEWS
ಶೃದ್ದಾ ನೆನಪಾದಾಗ ಫ್ರಿಡ್ಜ್ ನಿಂದ ತಲೆ ತೆಗೆದು ನೋಡುತ್ತಿದ್ದ ಹಂತಕ ಅಫ್ತಾಬ್…!!

ನವದೆಹಲಿ ನವೆಂಬರ್ 16: ರಾಷ್ಟ್ರ ರಾಜಧಾನಿಯಲ್ಲಿ ಭೀಕರ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನದಿಂದ ದಿನಕ್ಕೆ ಭಯಾನಕ ವಿಷಯಗಳು ಬಯಲಾಗುತ್ತಿದೆ. ಪ್ರೇಯಸಿಯನ್ನು ಕೊಂದು 35 ತುಂಡುಗಳನ್ನಾಗಿಸಿದ ಹಂತಕ ಅಫ್ತಾಬ್ ನ ವಿಕೃತಿ ಇದೀಗ ಪೊಲೀಸರು ಹೇಳಿದ್ದು, ಪೊಲೀಸರು ಮುಂದಿನ ತನಿಖೆಗೆ ಆರೋಪಿಯ ಮಂಪರು ಪರೀಕ್ಷೆಗೆ ಮುಂದಾಗಿದ್ದಾರೆ.
ಡೇಟಿಂಗ್ ಆ್ಯಪ್‍ನ ಮೂಲಕ ಪರಿಚಯವಾಗಿದ್ದ ಶ್ರದ್ಧಾ ಹಾಗೂ ಅಫ್ತಾಬ್ ಇಬ್ಬರು 3 ವರ್ಷಗಳ ಕಾಲ ಲೀವಿಂಗ್ ರಿಲೇಶನ್ ಶಿಪ್‍ನಲ್ಲಿದ್ದರು. ಮದುವೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಶ್ರದ್ಧಾಳ ಕತ್ತು ಹಿಸುಕಿ ಕೊಂದಿದ್ದ ಅಫ್ತಾಬ್ ಬಳಿಕ ಆಕೆಯ ದೇಹವನ್ನು 35 ಪೀಸ್‍ಗಳಾಗಿ ಮಾಡಿದ್ದ.

ಆದರೆ ಶ್ರದ್ಧಾಳ ತಲೆಯ ಭಾಗಕ್ಕೆ ಒಂದು ಸ್ವಲ್ಪವೂ ಹಾನಿಯಾಗದಂತೆ ನೋಡಿಕೊಂಡಿದ್ದ. ದೇಹವನ್ನು ತುಂಡು ತುಂಡಾಗಿ ಕತ್ತರಿಸಿದರೂ ತಲೆ ಬುರುಡೆಯನ್ನು ಫ್ರಿಡ್ಜ್‌ನಲ್ಲಿ ಹಾಗೇ ಉಳಿಸಿಕೊಂಡಿದ್ದ. ಇನ್ನೂ ಶ್ರದ್ಧಾಳ ನೆನಪಾದಾಗಲೆಲ್ಲ ಫ್ರಿಡ್ಜ್‌ನ್ನು ತೆಗೆದು ಆ ತಲೆ ಬುರುಡೆಯನ್ನು ನೋಡಿ ಅವಳೊಂದಿಗೆ ಕ್ಷಣಗಳನ್ನು ನೆನಪಿಸಿಕೊಳ್ತಿದ್ದ ಎಂದು ಪೊಲೀಸ್ ವಿಚಾರಣೆ ವೇಳೆ ಬಯಲಾಗಿದೆ.