Connect with us

    LATEST NEWS

    ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿಗಾಹುತಿಯಾದ ಇಲೆಕ್ಟ್ರಿಕಲ್ ಅಂಗಡಿ

    ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿಗಾಹುತಿಯಾದ ಇಲೆಕ್ಟ್ರಿಕಲ್ ಅಂಗಡಿ

    ಉಡುಪಿ ಜುಲೈ 30: ಶಾರ್ಟ್ ಸರ್ಕ್ಯುಟ್ ನಿಂದಾಗಿ ಇಲೆಕ್ಟ್ರಿಕಲ್ ಅಂಗಡಿ ಬೆಂಕಿಗೆ ಆಹುತಿಯಾದ ಘಟನೆ ಬೈಂದೂರಿನಲ್ಲಿ ನಡೆದಿದೆ.
    ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಶಾರ್ಟ್ ಸರ್ಕ್ಯುಟ್ ನಿಂದಾಗಿ ಎಲೆಕ್ಟ್ರಿಕ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

    ಕಟ್ಟಡದಲ್ಲಿದ ಇತರ ಎರಡು ಅಂಗಡಿಗಳಿಗೂ ಬೆಂಕಿ ಹಬ್ಬಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿದ್ದು, ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದ್ದು, ಕಾರ್ಯಚರಣೆ ಮೂಲಕ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

    ಇಲೆಕ್ಟ್ರಿಕಲ್ ಅಂಗಡಿಯಲ್ಲಿ ಅಂದಾಜು 15 ಲಕ್ಷ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಸುರೇಶ್ ಪೂಜಾರಿ ಮಾಲೀಕತ್ವದ ಇಲೆಕ್ಟ್ರಿಕಲ್ ಅಂಗಡಿ ಇದಾಗಿದ್ದು ಬೆಂಕಿ ಜ್ವಾಲೆಗೆ ಇಲೆಕ್ಟ್ರಿಕಲ್ ಅಂಗಡಿಯ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *