Connect with us

LATEST NEWS

ರೀಲ್ಸ್ ಹುಚ್ಚು – 11 ವರ್ಷದ ಮಗಳ ಮುಂದೆಯೇ ಗಂಗೆ ಪಾಲಾದ ತಾಯಿ

ಉತ್ತರಾಖಂಡ್ ಎಪ್ರಿಲ್ 18: ರೀಲ್ಸ್ ಹುಚ್ಚಿಗೆ ಮಹಿಳೆಯೊಬ್ಬರು ಗಂಗೆಯ ಪಾಲಾದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ. ಏಪ್ರಿಲ್ 16 ರಂದು ಉತ್ತರಾಖಂಡದ ಉತ್ತರಕಾಶಿ ಬಳಿಯ ಗಂಗಾನದಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಈ ದುರ್ಘಟನೆ ನಡೆದಿದೆ. ನೇಪಾಳದ ಕುಟುಂಬವೊಂದಕ್ಕೆ ಮೋಜಿನ ರಜೆ ದುರಂತವಾಗಿ ಪರಿವರ್ತಿಸಿದೆ.


ಗಂಗಾನದಿಯ ಉಪನದಿ ಭಾಗಿರಥಿ ನದಿಯ ತಟದ ಉತ್ತರಕಾಶಿಯಲ್ಲಿ ಮಹಿಳೆ ತನ್ನ ಮಗಳ ಕೈಯಲ್ಲಿ ಮೊಬೈಲ್ ಕೊಟ್ಟು ರೀಲ್ಸ್ ಮಾಡಲು ನದಿಗೆ ಇಳಿದಿದ್ದಾಳೆ. ಈ ವೇಳೆ ಆಯತಪ್ಪಿ ಸೀದಾ ನದಿಗೆ ಮಹಿಳೆ ಬಿದ್ದಿದ್ದು, ರಭಸದಿಂದ ಹರಿಯುತ್ತಿರುವ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ. ಈ ವೇಳೆ ಮಗಳು ಅಮ್ಮಾ ಎಂದು ಕೂಗಾಡಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಮೃತ ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. ಮಹಿಳೆಯ ಪತ್ತೆಗಾಗಿ ವಿಪತ್ತು ನಿರ್ವಹಣಾ ತಂಡದವರು ಹುಡುಕಾಟ ನಡೆಸಿದ್ದಾರೆ.

Share Information
Continue Reading
Advertisement
1 Comment

1 Comment

    Leave a Reply

    Your email address will not be published. Required fields are marked *