Connect with us

    LATEST NEWS

    ಕ್ಯಾಬಿನ್ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಿರ್ವ ಡಾನ್ ಬಾಸ್ಕೋ ಶಾಲೆ ಪ್ರಾಂಶುಪಾಲ

    ಕ್ಯಾಬಿನ್ ಒಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಶಿರ್ವ ಡಾನ್ ಬಾಸ್ಕೋ ಶಾಲೆ ಪ್ರಾಂಶುಪಾಲ

    ಉಡುಪಿ ಅಕ್ಟೋಬರ್ 12 : ಉಡುಪಿ ಶಿರ್ವದ ಪ್ರತಿಷ್ಠಿತ ಡಾನ್ ಬಾಸ್ಕೊ ಶಾಲೆಯ ಪ್ರಾಂಶುಪಾಲರಾದ ವಂದನೀಯ ಮಹೇಶ್ ಡಿಸೋಜಾ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಅವರಿಗೆ 36 ವರ್ಷ ವಯಸ್ಸಿನ ಅವರು ತಡ ರಾತ್ರಿ ಶಾಲೆಯ ಕ್ಯಾಬಿನ್ ಒಳಗಿನ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದು ಬಂದಿಲ್ಲ.

    ಮೃತ ಧರ್ಮಗುರುಗಳು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯವಾಗಿ ಉದಯವಾದ ಬಳಿಕ ಪ್ರಥಮ ಧರ್ಮಗುರುವಾಗಿ 2013ರಲ್ಲಿ ಗುರು ದೀಕ್ಷೆ ಪಡೆದಿದ್ದರು. ಮೂಲತಃ ಮೂಡುಬೆಳ್ಳೆಯವರಾಗಿದ್ದ ಅವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿದ್ದರು.

    ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟ ಶಾಲೆ ಯಾಗಿದ್ದು ಸಿಬಿಎಸ್ ಸಿ ಪಠ್ಯಕ್ರಮಕ್ಕೆ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಘಟನಾ ಸ್ಥಳಕ್ಕೆ ಮಧ್ಯರಾತ್ರಿಯೇ ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶಿರ್ವ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *