LATEST NEWS
ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಶಿರ್ವ ಮೂಲದ ನರ್ಸ್
ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಶಿರ್ವ ಮೂಲದ ನರ್ಸ್
ಉಡುಪಿ ಜುಲೈ 27: ಸೌದಿ ಅರೇಬಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿದ್ದ ಶಿರ್ವ ಮೂಲದ ಮಹಿಳೆಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಸೌದಿ ಅರೇಬಿಯಾದ ಆರೋಗ್ಯ ಇಲಾಖೆಯ ಆಸ್ಪತ್ರೆಯೊಂದರಲ್ಲಿ ಇವರು ನರ್ಸ್ ಆಗಿ ಕೆಲಸ ಮಾಡುತ್ತಿದ್ದರು.
ಹೆಝಲ್ ಜೋತ್ಸ್ನಾ ಕ್ವಾಡ್ರಸ್ ನಿಗೂಢವಾಗಿ ಮೃತಪಟ್ಟ ನರ್ಸ್. ಕಳೆದ 6 ವರ್ಷಗಳಿಂದ ಹೆಝಲ್ ಅಲ್ ಮಿಕ್ವಾ ಜನರಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ತಿಂಗಳ ಜುಲೈ 19 ರಂದು ಇವರು ಊರಲ್ಲಿರುವ ಪತಿ ಅಶ್ವಿನ್ ಮಥಾಯಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದರು.
ಅದೇ ಕೊನೆ ನಂತರ ಹೆಝಲ್ ಮನೆಯವರ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.ಅದಾಗಿ ಎರಡು ದಿನಗಳ ಬಳಿಕ ಅವರ ಸಹೋದ್ಯೋಗಿಯೊಬ್ಬರು ಮಹಿಳೆ ಸಾವನ್ನಪ್ಪಿದ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾರೆ. ಆದರೆ ಈ ಸಾವು ಹೇಗೆ ಸಂಭವಿಸಿದೆ ಮತ್ತು ಯಾವಾಗ ಸಂಭವಿಸಿದೆ ಎಂಬ ಬಗ್ಗೆ ಪತಿ ಅಶ್ವಿನ್ ಗೂ ಮಾಹಿತಿ ಇಲ್ಲ.
ಈ ಸಂಬಂಧ ವಿಧಾನಪರಿಷತ್ ಸದಸ್ಯ ಐವನ್ ಡಿಸೋಝಾ ಮತ್ತು ಉಡುಪಿ ಶಾಸಕ ರಘುಪತಿ ಭಟ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರನ್ನು ಸಂಪರ್ಕಿಸಿದ್ದಾರೆ. ಉಡುಪಿ ಡಿಸಿ ಪ್ರಿಯಾಂಕಾ ಮೇರಿ ಅವರಿಗೂ ಮಾಹಿತಿ ನೀಡಲಾಗಿದ್ದು ಮುಂದಿನ ಪ್ರಕ್ರಿಯೆಗೆ ಪ್ರಯತ್ನ ನಡೆಯುತ್ತಿದೆ.