KARNATAKA
ಶಿರೂರು ಗುಡ್ಡ ಕುಸಿತ – ತಮಿಳುನಾಡಿನ ಲಾರಿ ಚಾಲಕ ನಾಪತ್ತೆ
ಶಿರೂರು ಜುಲೈ 25: ಶಿರೂರು ಗುಡ್ಡ ಕುಸಿತಕ್ಕೆ ಪ್ರಕರಣದಲ್ಲಿ ಇದೀಗ ನಾಪತ್ತೆಯಾಗಿರುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಕೇರಳದ ಲಾರಿ ಚಾಲಕ ಅರ್ಜುನ್ ಹುಡುಕಾಟದಲ್ಲಿರುವಾಗಲೇ ಇದೀಗ ತಮಿಳುನಾಡಿನ ಲಾರಿ ಚಾಲಕರೊಬ್ಬರು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ. ಇದರೊಂದಿಗೆ ಒಟ್ಟು 11 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯ ಮೇಲೆ ಗುಡ್ಡ ಕುಸಿತವಾಗಿ ಈಗಾಗಲೇ 9 ದಿನಗಳಾಗುತ್ತಾ ಬಂದಿದೆ. ಈಗಾಗಲೇ ಈ ಘಟನೆಯಲ್ಲಿ ಮಣ್ಣಿನಡಿ ಸಿಲುಕಿ ಸಾವನಪ್ಪಿದ್ದ 7 ಜನರ ಮೃತದೇಹ ಪತ್ತೆ ಮಾಡಲಾಗಿದೆ. ಇನ್ನೂ 4 ಜನರ ಮೃತದೇಹ ಹುಡುಕಲು ಪೊಲೀಸರು, ಮಿಲಿಟರಿ ಪಡೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳಿಂದ ಕಾರ್ಯಾಚರಣೆ ನಡೆಯುತ್ತಿದೆ.
ಈಗ ಶಿರೂರು ಗುಡ್ಡ ಕುಸಿತದಿಂದ ನಾಪತ್ತೆ ಆದವರ ಸಂಖ್ಯೆ ಒಟ್ಟು 11 ಕ್ಕೆ ಏರಿಕೆಯಾಗಿದೆ. ದುರ್ಘಟನೆಯಲ್ಲಿ ತಮಿಳುನಾಡು ಮೂಲದ ಲಾರಿ ಡ್ರೈವರ್ ಸರವಣನ್ ಕೂಡಾ ನಾಪತ್ತೆಯಾಗಿದ್ದಾರೆ. ಸರವಣನ್ ನಾಪತ್ತೆ ಹಿನ್ನೆಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ನಾಪತ್ತೆ ಆಗಿರುವ ಸರವಣನ್ ಮಾವ ಸೆಂಥಿಲ್ ಎಂಬವರಿಂದ ದೂರು ದಾಖಲು ಆಗಿದೆ. ಲಾರಿಯಲ್ಲಿ ಹೋಗುವಾಗ ಮೊಬೈಲ್ ಚಾರ್ಜ್ ಕಡಿಮೆಯಾಗಿ ಮೊಬೈಲ್ ಸ್ವಿಚ್ ಆಫ್ ಆಗಿರಬಹುದು ಎಂದುಕೊಂಡು ಸುಮ್ಮನಿದ್ದರು. ಆದರೆ, ಬಹಳ ದಿನ ಕಳೆದ್ರೂ ಮೊಬೈಲ್ ಆನ್ ಆಗದಕ್ಕೆ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ಆತನ ಜೊತೆಗೆ ಸಂಪರ್ಕದಲ್ಲಿದ್ದ ಲಾರಿ ಚಾಲಕರು ನಿಮ್ಮ ಅಳಿಯ ಶಿರೂರು ಬಳಿ ಇದ್ದಾಗ ತಮಗೆ ಕರೆ ಮಾಡಿದ್ದಾಗಿ ಮಾಹಿತಿ ನೀಡಿದ್ದಾರೆ. ಇಷ್ಟು ಮಾಹಿತಿ ಲಭ್ಯವಾಗುತ್ತಿದ್ದಂತೆಯೇ ಸರವಣ ಅವರ ಮಾವ ಶಿರೂರಿಗೆ ಬಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇನ್ನು ಶಿರೂರು ಗುಡ್ಡ ಕುಸಿತದ ಬಳಿಯೇ ಆತನ ಟ್ಯಾಂಕರ್ ಅನ್ನು ಕೂಡ ನಿಲ್ಲಿಸಿಲಾಗಿತ್ತು. ಆದರೆ, ಜಿಲ್ಲಾಡಳಿತದವರು ಈ ವಾಹನವನ್ನು ಬೇರೆ ಕಡೆ ಸ್ಥಳಾಂತರ ಮಾಡಿದ್ದರು. ಆದರೆ, ಲಾರಿ ಚಾಲಕ ಮಾತ್ರ ನಾಪತ್ತೆಯಾಗಿದ್ದು, ಆತನೂ ಸಾವನ್ನಪ್ಪಿದ್ದಾನೆ ಎಂದು ದೂರು ದಾಖಲಿಸಲಾಗಿದೆ.