DAKSHINA KANNADA
ಗುಡ್ಡ ಕುಸಿತ ಶಿರಾಢಿಯಲ್ಲಿ ವಾಹನ ಸಂಚಾರ ಸ್ಥಗಿತ
ಗುಡ್ಡ ಕುಸಿತ ಶಿರಾಢಿಯಲ್ಲಿ ವಾಹನ ಸಂಚಾರ ಸ್ಥಗಿತ
ಮಂಗಳೂರು ಅಗಸ್ಟ್ 15: ಶಿರಾಡಿ ಘಾಟ್ ನ ಮಾರನಹಳ್ಳಿ ಸಮೀಪದ ದೊಡ್ಡತಪ್ಲೆ ಎಂಬಲ್ಲಿ ಗ್ಯಾಸ್ ಟ್ಯಾಂಕರ್ ಗುಡ್ಡ ಕುಸಿತಕ್ಕೆ ಸಿಲುಕಿ ರಸ್ತೆಯಿಂದ 75 ಅಡಿ ಆಳಕ್ಕೆ ಬಿದ್ದಿದ್ದು ಇಬ್ಬರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ.
ನಿನ್ನೆ ರಾತ್ರಿ ಗುಡ್ಡ ಕುಸಿತಕ್ಕೊಳಗಾದ ಸಮಯದಲ್ಲಿ ಸ್ಥಳದಲ್ಲಿ ಸಂಚರಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ರಸ್ತೆಯಿಂದ ಕೆಳಕ್ಕೆ ದೂಡಲ್ಪಟ್ಟು ಮಣ್ಣಿನ ಕುಸಿತದ ನಡುವೆ ಬಿದ್ದಿತ್ತು.
ಗ್ಯಾಸ್ ಸೋರಿಕೆಯಾಗುತ್ತಿದ್ದ ಟ್ಯಾಂಕರ್ ನ ಚಾಲಕ ರಾಯಚೂರಿನ ಬಸವರಾಜು ಇವರ ಮೃತದೇಹವನ್ನು ಈಗ ಟ್ಯಾಂಕರ್ ನಿಂದ ಹೊರ ತೆಗೆಯಲಾಗಿದೆ. ಟ್ಯಾಂಕರ್ ನಲ್ಲಿ ಇನ್ನೋರ್ವನೂ ಇದ್ದನೆನ್ನಲಾಗಿದ್ದು ರಕ್ಷಣಾ ಕಾರ್ಯ ಹಾಸನ ಜಿಲ್ಲಾ ಎಸ್ಪಿ ಯವರ ನೇತೃತ್ವದಲ್ಲಿ ನಡೆಯುತ್ತಿದೆ.
ಟ್ಯಾಂಕರ್ ನಲ್ಲಿದ್ದ ಗ್ಯಾಸ್ ನಿನ್ನೆ ರಾತ್ರಿಯೇ ಪೂರ್ತಿ ಸೋರಿಕೆಯಾಗಿ ಖಾಲಿಯಾಗಿದೆ. ಟ್ಯಾಂಕರ್ ನಲ್ಲಿ ಚಾಲಕ ರಾಯಚೂರು ಮೂಲದ ಬಸವರಾಜು ಮತ್ತು ಕಂಡಕ್ಟರ್ ಚನ್ನರಾಯಪಟ್ಣದ ಎನ್ನಲಾಗಿದ್ದು ಚಾಲಕನ ಶವವನ್ನು ತೆಗೆಯಲಾಗಿದೆ. ಈಗ ಇನ್ನೊಬ್ಬಾತನ ದೇಹ ಮತ್ತು ಟ್ಯಾಂಕರ್ ಕ್ಯಾಬಿನ್ ಮಣ್ಣಿನೊಳಗೆ ಹೂತು ಹೋಗಿದ್ದು ,ಇದನ್ನು ಹೊರತೆಗೆಯುವ ಕಾರ್ಯ ನಡೆಸಲಾಗುತ್ತಿದೆ.
ಹಾಸನ ಜಿಲ್ಲಾಧಿಕಾರಿಯವರ ಆದೇಶದನ್ವಯ ಸಕಲೇಶಪುರದ ಉಪವಿಭಾಗಾಧಿಕಾರಿ ಯವರು ಆದೇಶಮಾಡಿದ್ದು ಇಂದಿನಿಂದ 15 ದಿನಗಳವರೆಗೆ ಘನವಾಹನಗಳ ಸಂಚಾರ ನಿಷೇಧ ಮತ್ತು 4 ದಿನಗಳ ಕಾಲ ಲಘುವಾಹನಗಳ ಸಂಚಾರ ನಿಷೇಧಿಸಿದ್ದಾರೆ.