LATEST NEWS
ಮಂಗಳೂರು – ತೀವ್ರ ಅಸ್ವಸ್ಥಗೊಂಡಿದ್ದ ಲೈಬಿರಿಯಾ ಹಡಗಿನ ಸಿಬ್ಬಂದಿ ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್

ಮಂಗಳೂರು ಡಿಸೆಂಬರ್ 27: ಮಂಗಳೂರು ಬಂದರಿನಿಂದ 9.5 ನಾಟಿಕಲ್ ಮೈಲ್ ದೂರದಲ್ಲಿ ನಿಂತಿದ್ದ ಲೈಬಿರಿಯಾ ಮೂಲದ ಹಡಗಿನ ಸಿಬ್ಬಂದಿಯೊಬ್ಬರು ತೀವ್ರ ಅನಾರೋಗ್ಯಕ್ಕಿಡಾಗಿದ್ದು ಅವರನ್ನು ಕೋಸ್ಟ್ ಗಾರ್ಡ್ ಶಿಫ್ ರಕ್ಷಣೆ ಮಾಡಿ ಆಸ್ಪತ್ರೆ ದಾಖಲಿಸಿದೆ.
ನವಮಂಗಳೂರು ಬಂದರಿನಿಂದ ಸುಮಾರು 9.5 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದ್ದ ಲೈಬಿರಿಯಾದ ಹಡಗಿನ ಸಿಬ್ಬಂದಿಯೊಬ್ಬರಿಗೆ ತೀವ್ರ ಅನಾರೋಗ್ಯ ವಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕೋಸ್ಟ್ ಗಾರ್ಡ್ ಶಿಫ್ ಸಿ-448 ಹಡಗಿಮ ಸಮೀಪ ತೆರಳಿ 52 ವರ್ಷ ಪ್ರಾಯದ ಸಿಬ್ಬಂದಿಯನ್ನು ರಕ್ಷಣೆ ಮಾಡಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದೆ. ಹಡಗಿನ ಸಿಬ್ಬಂದಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಕೋಸ್ಟ್ ಗಾರ್ಡ್ ಮಾಹಿತಿ ನೀಡಿದೆ.
