Connect with us

    KARNATAKA

    ಶಿವಮೊಗ್ಗ: ಲಾರಿ-ಕಾರು ಮುಖಾಮುಖಿ ಡಿಕ್ಕಿ, ಮೂವರು ಸಾವು; ಓರ್ವನ ಗಂಭೀರ

    ಶಿವಮೊಗ್ಗ, ಡಿಸೆಂಬರ್ 11: ನಗರದ ಹೊರವಲಯದ ಕಲ್ಲಾಪುರ ಗ್ರಾಮದಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ನಡೆದಿದ್ದು, ಮೂವರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

    ಶಿವಮೊಗ್ಗ ಹೊರವಲಯದ ಅಬ್ಬಲಗೆರೆ ಸಮೀಪದ ಕಲ್ಲಾಪುರ ಗ್ರಾಮದಲ್ಲಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಕಾರಿನಲ್ಲಿದ್ದ ವಿವೇಕ್ (21), ಕಾರ್ತಿಕ್ (21) ಹಾಗೂ ಮೋಹನ್ (21) ಎಂದು ಗುರುತಿಸಲಾಗಿದೆ.

    ಕಾರಿನ‌ಲ್ಲಿ ಹಿಂಬದಿ ಕುಳಿತಿದ್ದ ರುದ್ರೇಶ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply