LATEST NEWS
ಎಪ್ರಿಲ್ 19 ರ ಶಿವಮೊಗ್ಗ ಕಂಬಳ ರದ್ದು – ಅದೇ ದಿನ ಬೈಂದೂರಿನಲ್ಲಿ ಕಂಬಳಕ್ಕೆ ನಿರ್ಧಾರ

ಮೂಡುಬಿದಿರೆ ಮಾರ್ಚ್ 27: ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕಂಬಳ ನಡೆಸಲು ನಿರ್ಧರಿಸಿದ್ದರೂ, ಪೇಟಾದವರು ಶಿವಮೊಗ್ಗ ಕಂಬಳ ವಿರೋಧಿಸಿ ಕೋರ್ಟ್ ಮೆಟ್ಟಿಲೇರಿರುವ ಕಾರಣ ಶಿವಮೊಗ್ಗದಲ್ಲಿ ಏಪ್ರಿಲ್ 19ರಂದು ನಡೆಸಲು ನಿರ್ಧರಿಸಿದ್ದ ಕಂಬಳ ರದ್ದು ಪಡಿಸಿ ಅದೇ ದಿನದಂದು ಬೈಂದೂರಿನಲ್ಲಿ ಕಂಬಳ ನಡೆಸಲು ಕಂಬಳ ಸಮಿತಿ ನಿರ್ಧರಿಸಿದೆ.
ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಇಲ್ಲಿನ ಸೃಷ್ಟಿ ಗಾರ್ಡನ್‌ನಲ್ಲಿ ಬುಧವಾರ ಈ ಕುರಿತು ಸಭೆ ನಡೆಯಿತು. ಜಿಲ್ಲೆಯಲ್ಲಿ ಈ ವರ್ಷದ ಕಂಬಳಗಳು ಮುಕ್ತಾಯದ ಹಂತದಲ್ಲಿದ್ದು, ಮೂರ್ನಾಲ್ಕು ಕಂಬಳಗಳು ಮಾತ್ರ ಬಾಕಿ ಉಳಿದಿವೆ. ಈ ಹಿಂದಿನ ಒಂದೆರಡು ಕಂಬಳಗಳಲ್ಲಿ ಗೊಂದಲ ಉಂಟಾಗಿದ್ದು, ಇಂತಹ ಘಟನೆಗಳು ಮುಂದಿನ ಕಂಬಗಳಲ್ಲಿ ಪುನರಾವರ್ತನೆಯಾಗದಂತೆ ಕಂಬಳದ ತೀರ್ಪುಗಾರರು, ಯಜಮಾನರು ಸಹಕರಿಸಲು ಕೋರಲಾಯಿತು. ಈ ಕಂಬಳಗಳನ್ನು ಗೊಂದಲರಹಿತವಾಗಿ ನಡೆಸುವ ಕುರಿತು ಜಿಲ್ಲಾ ಕಂಬಳ ಸಮಿತಿ ಚರ್ಚಿಸಿತು.
