Connect with us

KARNATAKA

ಶಿವಮೊಗ್ಗ : ಬೈಕ್‌ ಶೋ ರೂಂನಲ್ಲಿ ಭಾರಿ ಬೆಂಕಿ ಅವಘಡ, ಮಾಜಿ ಉದ್ಯೋಗಿ ಪೊಲೀಸ್ ವಶಕ್ಕೆ..!!

ಶಿವಮೊಗ್ಗ : ಶಿವಮೊಗ್ಗ ಎನ್‌.ಟಿ.ರಸ್ತೆ ಜಂಕ್ಷನ್‌ನಲ್ಲಿರುವ ಕಾರ್ತಿಕ್‌ ಮೋಟರ್ಸ್‌ ಶೋ ರೂಂನಲ್ಲಿ ಭಾರಿ ಅಗ್ನಿ ಅವಘಡ  ಸಂಭವಿಸಿದೆ. ಬೆಂಕಿಯಿಂದಾಗಿ ಶೋ ರೂಂನಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ.

ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದು ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೂರ್ನಾಲ್ಕು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದವು. ಇನ್ನು, ಬೆಂಕಿ ಹೊತ್ತಿಕೊಂಡ ವಿಷಯ ತಿಳಿಯುತ್ತಿದ್ದಂತೆ ಶೋ ರೂಂ ಮುಂಭಾಗ ದೊಡ್ಡ ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಹಾಗಾಗಿ ಎನ್‌.ಟಿ.ರಸ್ತೆ ಮತ್ತು ಬೈಪಾಸ್‌ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ಸಂಚಾರ ಠಾಣೆ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಹರಸಾಹಸ ಪಡಬೇಕಾಯಿತು.

ಇನ್ನು ಮಾಜಿ ಉದ್ಯೋಗಿಯೇ ಶೋ ರೂಂಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪಿಸಲಾಗಿದ್ದು ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ಆತನ ವಿಚಾರಣೆ ನಡೆಯುತ್ತಿದೆ. ಘಟನೆಯಿಂದಾಗಿ ಕಾರ್ತಿಕ್‌ ಮೋಟರ್ಸ್‌ ಶೂಂನಲ್ಲಿ ದೊಡ್ಡ ಮಟ್ಟದ ವಸ್ತುಗಳು ಅಗ್ನಿಗೆ ಆಹುತಿಯಾಗಿವೆ.

ಒಳಾಂಗಣ ವಿನ್ಯಾಸ, ಕೆಲವು ವಾಹನಗಳು, ಎಲೆಕ್ಟ್ರಾನಿಕ್‌ ಉಪಕರಣಗಳು ಹಾನಿಗೀಡಾಗಿವೆ. ಮೇಲ್ನೋಟಕ್ಕೆ ಲಕ್ಷಾಂತರ ರೂ. ನಷ್ಟವಾಗಿರುವುದು ಗೋಚರಿಸುತ್ತದೆ. ನಷ್ಟದ ಅಂದಾಜು ಇನ್ನಷ್ಟೆ ಆಗಬೇಕಿದೆ. ಬೆಳಗ್ಗೆ ಕೆಲಸಕ್ಕೆ ಬಂದ ಶೋ ರೂಂ ಸಿಬ್ಬಂದಿ ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿ ದಿಗ್ಭ್ರಾಂತರಾಗಿ ಹೊರಗೆ ನಿಂತಿದ್ದರು. ಶೋ ರೂಂ ಒಳಗಿದ್ದ ವಾಹನಗಳನ್ನು ತಕ್ಷಣಕ್ಕೆ ಹೊರಗೆ ತಂದು ನಿಲ್ಲಿಸಿ ಹಾನಿ ಪ್ರಮಾಣ ಕಡಿಮೆ ಮಾಡಿದ್ದಾರೆ.

https://youtu.be/3FBKOlpB7H8

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *