FILM
ಸತ್ಯವತಿಯಾಗಿ ಕನ್ನಡ ಮತ್ತೆ ಎಂಟ್ರಿ ಕೊಟ್ಟ ಕರಾವಳಿ ಬೆಡಗಿ ಶಿಲ್ಪಾಶೆಟ್ಟಿ

ಬೆಂಗಳೂರು ಮಾರ್ಚ್ 24: ಕನ್ನಡ ಸಿನೆಮಾಗಳು ಜಾಗತಿ ಮನ್ನಣೆ ಪಡೆದ ಬೆನ್ನಲ್ಲೇ ಇದೀಗ ಬಾಲಿವುಡ್ ನಟರೂ ಕನ್ನಡ ಸಿನೆಮಾಗಳಲ್ಲಿ ನಟಿಸಲು ಪ್ರಾರಂಭಿಸಿದ್ದಾರೆ. ಇದೀಗ ಬಾಲಿವುಡ್ ನಟಿ ಕರಾವಳಿ ಬೆಡಗಿ ಶಿಲ್ಪಾ ಶೆಟ್ಟಿ ಮತ್ತೆ ಕನ್ನಡ ಸಿನೆಮಾಗೆ ಎಂಟ್ರಿ ಕೊಟ್ಟಿದ್ದು, ಈ ಬಾರಿ ಸತ್ಯವತಿಯಾಗಿ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. `ಕೆಡಿ’ಯಲ್ಲಿ ಧ್ರುವ ಜೊತೆ ಶಿಲ್ಪಾ ಶೆಟ್ಟಿ ಭಿನ್ನ ಪಾತ್ರದ ಮೂಲಕ ಕಮ್‌ಬ್ಯಾಕ್ ಮಾಡಿದ್ದಾರೆ. ರಾಯಲ್ ಲುಕ್‌ನಲ್ಲಿ ಮಿಂಚಿದ್ದಾರೆ.
ಡೈರೆಕ್ಟರ್ ಪ್ರೇಮ್ ತಮ್ಮ ಪ್ರತಿ ಸಿನಿಮಾದಲ್ಲಿಯೂ ಹೊಸ ಕಾನ್ಸೆಪ್ಟ್ ಮೂಲಕ ಬರುತ್ತಾರೆ. ಈಗ ಧ್ರುವಗೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಸೌಂಡ್ ಮಾಡ್ತಿದ್ದಾರೆ. ಈಗಾಗಲೇ `ಕೆಜಿಎಫ್ 2′ ಅಧೀರ ಸಂಜಯ್ ದತ್ (Sanjay Dutt)ಎಂಟ್ರಿ ಕೊಟ್ಟ ಬೆನ್ನಲ್ಲೇ ಶಿಲ್ಪಾ ಶೆಟ್ಟಿ ಕೂಡ ಸದ್ದಿಲ್ಲದೇ ತಮ್ಮ ಭಾಗದ ಚಿತ್ರೀಕರಣ ಮಾಡಿ ಮುಗಿಸಿ ಕೊಟ್ಟಿದ್ದರು.

ಇದೀಗ ಯುಗಾದಿ ಹಬ್ಬದ ಪ್ರಯುಕ್ತ ಚಿತ್ರದ ಪವರ್‌ಫುಲ್ ಸತ್ಯವತಿ ಪಾತ್ರದ (Sathyavathi) ಲುಕ್‌ನ ಚಿತ್ರತಂಡ ರಿವೀಲ್ ಮಾಡಿದ್ದಾರೆ. ಸತ್ಯವತಿಯಾಗಿ ಕರಾವಳಿ ನಟಿ ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಚೆಂದದ ಸೀರೆಯುಟ್ಟು ಉದ್ದದ ಜಡೆ ಮುಂದಕ್ಕೆ ಬಿಟ್ಟು, ಕೂಲಿಂಗ್ ಗ್ಲಾಸ್ ಧರಿಸಿ ರಾಯಲ್ ಆಗಿ ಶಿಲ್ಪಾ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ನಟಿಯ ಲುಕ್ ರಿವೀಲ್ ಆಗ್ತಿದ್ದಂತೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಿಲ್ಪಾ ಶೆಟ್ಟಿ 17 ವರ್ಷಗಳ ನಂತರ ಇದೀಗ `ಕೆಡಿ’ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರೀತ್ಸೋದ್ ತಪ್ಪಾ? ಆಟೋ ಶಂಕರ್, `ಒಂದಾಗೋಣ ಬಾ’ ಸಿನಿಮಾಗಳಲ್ಲಿ ನಟಿ ಅಭಿನಯಿಸಿದ್ದಾರೆ.