Connect with us

FILM

ಶಿಲ್ಪಾಶೆಟ್ಟಿ ಪತಿ ರಾಜ್ ಕುಂದ್ರಾ ಕಾಮದಾಹಕ್ಕೆ ಹೆದರಿದ್ದೆ – ನಟಿ ಶೆರ್ಲಿನ್ ಚೋಪ್ರಾ

ಮುಂಬೈ: ಬ್ಲೂ ಫಿಲ್ಮ್ ಪ್ರಕರಣಕ್ಕೆ ಪೊಲೀಸ್ ವಶದಲ್ಲಿರುವ ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಪತಿ ವಿರುದ್ದ ಈಗ ಮತ್ತೋರ್ವ ನಟಿ ಗಂಭೀರ ಆರೋಪ ಮಾಡಿದ್ದಾರೆ. ರಾಜ್ ಕುಂದ್ರಾ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದರು ಎಂದು ಹೇಳಿದ್ದಾರೆ.


ಮೂಲಗಳ ಪ್ರಕಾರ ಕಳೆದ ಏಪ್ರಿಲ್​ನಲ್ಲಿಯೇ ರಾಜ್​ ಕುಂದ್ರಾ ವಿರುದ್ಧ ಶೆರ್ಲಿನ್​ ಚೋಪ್ರಾ ದೂರು ನೀಡಿದ್ದರು. ಆ ದೂರಿನಲ್ಲಿ ರಾಜ್​ ಕುಂದ್ರಾ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದ್ದು, ಪ್ರಮುಖವಾಗಿ ತಮ್ಮ ಮೇಲೆ ರಾಜ್ ಕುಂದ್ರಾ ಲೈಂಗಿಕ ಹಲ್ಲೆ ಮಾಡಿದ್ದರು ಎಂದು ಆರೋಪಿಸಿದ್ದಾರೆ.


2019ರಲ್ಲಿ ಕುಂದ್ರಾ ನನ್ನ ಮ್ಯಾನೇಜರ್ ಅವರನ್ನು ಸಂಪರ್ಕಿಸಿ ಆ್ಯಪ್‌ ಬ್ಯುಸಿನೆಸ್‌ ಮಾಡುವ ಪ್ರಸ್ತಾಪ ಮಾಡಿದ್ದರು. ನನಗೆ ಆ ವ್ಯವಹಾರದ ಬಗ್ಗೆ ಇಷ್ಟವಿರಲಿಲ್ಲ, ಆಗಾಗಿ ಅದನ್ನು ತಿರಸ್ಕರಿಸಿದ್ದೆ. ಒಂದು ದಿನ ರಾಜ್‌ ಕುಂದ್ರಾ ನನ್ನ ಅನುಮತಿ ಇಲ್ಲದೇ ಮನೆಗೆ ಬಂದಿದ್ದರು. ನನ್ನ ಜೊತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದರು. ಇದರಿಂದ ನಮ್ಮ ನಡುವೆ ಜಗಳ ಶುರುವಾಯಿತು. ನಾನು ಬೇಡ ಎಂದು ವಿರೋಧಿಸಿದರೂ ಕೂಡ ರಾಜ್​ ಕುಂದ್ರಾ ಬಲವಂತವಾಗಿ ಕಿಸ್​ ಮಾಡಲು ಬಂದರು. ನನಗೆ ಭಯವಾಯಿತು. ಇದನ್ನೆಲ್ಲ ನಿಲ್ಲಿಸುವಂತೆ ಕೇಳಿಕೊಂಡೆ. ನಂತರ ಅವರನ್ನು ತಳ್ಳಿ ಓಡಿ ಹೋದೆ. ಶೌಚಾಲಯಕ್ಕೆ ತೆರಳಿ ಅಡಗಿಕೊಂಡೆ ಎಂದು ದೂರಿನಲ್ಲಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ ಎನ್ನಲಾಗಿದೆ.


ಇದೇ ವೇಳೆ ಶಿಲ್ಪಾ ಶೆಟ್ಟಿ ಜೊತೆ ನನ್ನ ಸಂಬಂಧ ಸರಿಯಿಲ್ಲ. ಹಾಗಾಗಿ ನಾನು ಸದಾ ಒತ್ತಡದಲ್ಲಿ ಇರುತ್ತೇನೆ ಎಂದು ಶರ್ಲಿನ್​​ ಬಳಿ ರಾಜ್​ ಕುಂದ್ರಾ ಹೇಳಿಕೊಂಡಿದ್ದರು ಎಂಬ ಸುದ್ದಿ ಈಗ ಬಹಿರಂಗ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *