LATEST NEWS
ತಾತ್ಕಾಲಿಕ ಕದನ ವಿರಾಮವನ್ನೇ ಐತಿಹಾಸಿಕ ಗೆಲವು ಎಂದ ಪಾಕಿಸ್ತಾನದ ಪ್ರಧಾನಿ

ಇಸ್ಲಮಾಬಾದ್ ಮೇ 11: ಪಾಕಿಸ್ತಾನ ಮತ್ತು ಭಾರತದ ನಡುವೆ ಎರ್ಪಟ್ಟಿರುವ ತಾತ್ಕಾಲಿಕ ಕದನ ವಿರಾಮವನ್ನೇ ಪಾಕಿಸ್ತಾನದ ಐತಿಹಾಸಿಕ ಗೆಲವು ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಘೋಷಿಸಿದ್ದಾರೆ.
ಪಹಲ್ಗಾಮ್ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ಶನಿವಾರ (ಮೇ 10) ಎರಡು ದೇಶಗಳ ನಡುವೆ ಕದನ ವಿರಾಮ ನಡೆದಿದೆ. ಆದರೆ ತನ್ನ ಮತ್ತೆ ಸುಳ್ಳು ಹೇಳವುದನ್ನು ಮುಂದುವರೆಸಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, ಶನಿವಾರ ಬಾರತದೊಂದಿಗಿನ ಕದನ ವಿರಾಮ ಒಪ್ಪಂದವನ್ನು ತಮ್ಮ ರಾಷ್ಟ್ರಕ್ಕೆ “ಐತಿಹಾಸಿಕ ವಿಜಯ” ಎಂದು ಘೋಷಿಸಿದರು.
ತಮ್ಮ ಭಾಷಣದಲ್ಲಿ ಭಾರತದ ಯುದ್ದ ವಿಮಾನಗಳನ್ನು ನಾವು ಹೊಡೆದುರುಳಿಸಿದ್ದು, ಭಾರತದ ವಿರುದ್ದ ನಾವು ಗೆಲುವು ಸಾಧಿಸಿದ್ದೇವೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ಹಲವು ದಿನಗಳ ಕಾಲ ಉಂಟಾದ ತೀವ್ರ ಉದ್ವಿಗ್ನತೆಯ ನಂತರ, ಭಾರತ ಮತ್ತು ಪಾಕಿಸ್ತಾನಗಳು ಭೂಮಿ, ವಾಯು ಮತ್ತು ಸಮುದ್ರದಾದ್ಯಂತದ ಎಲ್ಲಾ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಒಪ್ಪಿಕೊಂಡ ಕೆಲವೇ ಗಂಟೆಗಳ ನಂತರ ಪ್ರಧಾನಿ ಷರೀಫ್ ಸಾಂಕೇತಿಕತೆ ಮತ್ತು ರಾಷ್ಟ್ರೀಯ ಹೆಮ್ಮೆಯ ಬಗ್ಗೆ ಭಾರೀ ಭಾಷಣ ಮಾಡಿದರು. “ನಮ್ಮ ಕಾರ್ಯಾಚರಣೆ ದ್ವೇಷ, ಆಕ್ರಮಣಶೀಲತೆ ಮತ್ತು ಧಾರ್ಮಿಕ ಮತಾಂಧತೆಯ ವಿರುದ್ಧವಾಗಿತ್ತು. ಇದು ನಮ್ಮ ತತ್ವಗಳು ಮತ್ತು ಗೌರವದ ವಿಜಯ. ಗೌರವಾನ್ವಿತ ರಾಷ್ಟ್ರವಾಗಿ ಶತ್ರುವಿನೊಂದಿಗೆ ಏನು ಮಾಡಿದ್ದೇವೆಯೋ ಅದನ್ನು ಮಾಡಿದ್ದೇವೆ. ಇದು ಸಶಸ್ತ್ರ ಪಡೆಗಳಿಗೆ ಮಾತ್ರವಲ್ಲ, ಇಡೀ ರಾಷ್ಟ್ರಕ್ಕೆ ಸಿಕ್ಕ ಜಯ” ಎಂದು ಅವರು ಹೇಳಿದರು.