LATEST NEWS
ಅಕ್ರಮ ಗೋಸಾಗಾಟಗರಿಂದ ಗೋರಕ್ಷಕರ ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನ – ಆರೋಪಿಗಳ ವಿರುದ್ಧ ಗೂಂಡಾ ಕಾಯಿದೆ ದಾಖಲಿಸಿ – ಶರಣ್ ಪಂಪ್ ವೆಲ್

ಮಂಗಳೂರು ಮಾರ್ಚ್ 28: ಮಂಗಳೂರು ಸೂರಲ್ಪಾಡಿ ಮಸೀದಿ ಬಳಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಹತ್ಯೆ ಮಾಡಲು ಅಕ್ರಮ ಸಾಗಾಟ ನಡೆಸುತ್ತಿರುವ ಸಂಧರ್ಭ, ಅದನ್ನು ತಡೆಯುವಾಗ ಗೋರಕ್ಷಕರ ಜೊತೆಯಿದ್ದ ಚಂದನ್ ಭಟ್ ರವರ ವಾಹನದ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ ಮಾಡಿರುವ ಕೃತ್ಯ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಚಂದನ್ ಭಟ್ ರವರು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಅಕ್ರಮ ಗೋಸಾಗಾಟ, ಅಕ್ರಮ ಗೋಮಾಂಸ ಮಾರಾಟವು ಮಿತಿ ಮೀರುತ್ತಿದ್ದು ಕಳೆದ 10 ದಿನಗಳಲ್ಲಿ 6 ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಇದೀಗ ಗೋಸಾಗಾಟಗಾರರು ಅಕ್ರಮ ಗೋಸಾಗಾಟ ಮಾಡುವುದರೊಂದಿಗೆ ಅಕ್ರಮ ಪಿಸ್ತೂಲುಗಳನ್ನು ಬಳಸಿ ಗೋರಕ್ಷಕರ ಕೊಲೆಗೆ ಪ್ರಯತ್ನಿಸುತ್ತಿರುವುದು ಬಹಳ ಆತಂಕಕಾರಿಯಾಗಿದೆ. ಇದೊಂದು ಭಯೋದ್ಪಾದಕ ಕೃತ್ಯವಾಗಿದ್ದು, ಈ ಕೂಡಲೇ ನೈಜ ಆರೋಪಿಗಳನ್ನು ಬಂಧಿಸಿ, ಅವರ ಮೇಲೆ ಅಕ್ರಮ ಗೋಸಾಗಾಟ, ಗೋಕಳ್ಳತನ, ಗೋಹತ್ಯೆ ಕೇಸು, ARMS Act ಧಾಖಲಿಸುವುದರೊಂದಿಗೆ, ಗೂಂಡಾ ಕಾಯಿದೆ ಅಡಿ ಬಂಧಿಸಿ ಕ್ರಮಕೈಗೊಳ್ಳಲು ಆಗ್ರಹಿಸುತ್ತೇವೆ. ಎಂದು ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪುವೆಲ್ ಪ್ರಕಟಣೆಯಲ್ಲಿ ತಿಳಿಸಿದರು
