LATEST NEWS
ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಗೆ ಜಾಮೀನು

ಮಂಗಳೂರು ಮೇ 28: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆ ಬಂದ್ ಗೆ ಕರೆ ನೀಡಿದ್ದ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ವಿಎಚ್ ಪಿ ಮುಖಂಡ ಶರಣ ಪಂಪ್ ವೆಲ್ ಗೆ ಜಾಮೀನು ದೊರೆತಿದೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ದ.ಕ ಬಂದ್ ಕರೆ ನೀಡಿದ್ದ ಶರಣ್ ಪಂಪ್ ವೆಲ್ ಮೇಲೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇಂದು ಬಂಟ್ವಾಳದಲ್ಲಿ ರಹೀಂ ಕೊಲೆ ಪ್ರಕರಣದ ಬೆನ್ನಲ್ಲೇ ಪೊಲೀಸರು ಶರಣ್ ಪಂಪ್ ವೆಲ್ ನನ್ನು ಅರೆಸ್ಟ್ ಮಾಡಿದ್ದರು.

ಬಳಿಕ ಮಂಗಳೂರಿನ ಬೋಂದೆಲ್ ನ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಿದ್ದ ಪೊಲೀಸರು. ಈ ವೇಳೆ ಶರಣ್ ಪಂಪ್ ವೆಲ್ ಗೆ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ.