Connect with us

DAKSHINA KANNADA

ನಟಿ ಸಾನ್ಯಾ ಅಯ್ಯರ್ ಗೆ ಅನ್ಯಾಯ ಆಗಿದ್ದರೆ ಪೊಲೀಸ್ ದೂರು ನೀಡಲಿ – ಮಾಜಿ ಶಾಸಕಿ ಶಕುಂತಲಾ ಶೆಟ್ಟಿ

ಪುತ್ತೂರು ಫೆಬ್ರವರಿ 1: ಪುತ್ತೂರು ಕಂಬಳದಲ್ಲಿ ಚಿತ್ರನಟಿಗೆ ಕಿರುಕುಳ ಆಗಿದೆ  ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿಗೂ ಗಲಾಟೆಗೂ ಸಂಬಂಧವಿಲ್ಲ, ಇದೊಂದು ಉದ್ದೇಶಪೂರ್ವಕ ಮಾಡಿರುವ ಸುದ್ದಿ ಎಂದು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಹೇಳಿದ್ದಾರೆ.


ಪುತ್ತೂರು ಕಂಬಳದಲ್ಲಿ ನಟಿ ಸಾನ್ಯಾ ಅಯ್ಯರ್ ಅವರಿಗೆ ಕಿರುಕುಳ ನಡೆದ ಘಟನೆ ಬಗ್ಗೆ ಮಾತನಾಡಿದ ಅವರು ಮಹಿಳೆಗೆ ಅನ್ಯಾಯವಾದರೂ ಶಕುಂತಳಾ ಶೆಟ್ಟಿ ಮೌನವಾಗಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಅನ್ಯಾಯ ಆಗಿದೆ ಎಂದು ಮಹಿಳೆ ನನಗೆ ಹೇಳಬೇಕಲ್ಲವೇ? ಇಲ್ಲದಿದ್ದರೆ ನಾನೇನು ಮಾಡಲಿ? ನಾನು ರಾತ್ರಿ 11 ಗಂಟೆಗೆ ಕಂಬಳ ಗದ್ದೆಯಿಂದ ನಿರ್ಗಮಿಸಿದ್ದೇನೆ. ನಸುಕಿನ ಜಾವ ನಟಿಯರು ಕಂಬಳ ಗದ್ದೆಗೆ ಮತ್ತೊಮ್ಮೆ ಬಂದಿದ್ದರಂತೆ, ಆಗ ಯಾರೋ ಅವರ ಜತೆ ಅಸಭ್ಯ ವರ್ತನೆ ತೋರಿದನಂತೆ ಎಂದೆಲ್ಲ ಹೇಳುತ್ತಿದ್ದಾರೆ.

ಮರುದಿನ ಕುತ್ತಾರು ಕೊರಗಜ್ಜ ಸಾನಿಧ್ಯದಲ್ಲಿ ಅದೇ ನಟಿಯರೆಲ್ಲ ನನಗೆ ಸಿಕ್ಕಿದ್ದು, ಎಲ್ಲರೂ ಪುತ್ತೂರು ಕಂಬಳದ ವ್ಯವಸ್ಥೆ ಬಗ್ಗೆ ಹಾಡಿ ಹೊಗಳಿದ್ದಾರೆ. ಯಾರೂ ನನಗೆ ಹಿಂದಿನ ರಾತ್ರಿ ಅಹಿತಕರ ಘಟನೆ ನಡೆದಿದೆ ಎಂದು ಹೇಳಲೇ ಇಲ್ಲ ಎಂದರು.
ಅನ್ಯಧರ್ಮೀಯ ಅನ್ಯಾಯ ಮಾಡಿದ್ದಾನೆ ಎಂದೆಲ್ಲ ವೈರಲ್ ಮಾಡಲಾಗುತ್ತಿದೆ. ಮಹಿಳೆ ಮೇಲೆ ಯಾರೇ ದುಷ್ಕøತ್ಯ ಎಸಗಿದ್ದರೂ ಅದು ತಪ್ಪೆ. ಆತ ಅನ್ಯಧರ್ಮೀಯನೇ ಆಗಿರಲಿ, ಸ್ವಧರ್ಮೀಯನೇ ಆಗಿರಲಿ. ತಪ್ಪು ಮಾಡಿದವ ಆಧರ್ಮೀಯನೇ ಹೊರತು ಧರ್ಮೀಯನಲ್ಲ. ಘಟನೆ ಬಗ್ಗೆ ಸಂತ್ರಸ್ತರೆನೆಸಿಕೊಂಡವರು ದೂರು ನೀಡಿದರೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಿ. ಇದನ್ನೇ ನಾನು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.

https://youtu.be/_w6HO5q6t5I

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *