Connect with us

DAKSHINA KANNADA

ಮಂಗಳೂರು : ಕಾಮುಕ ಶಿಕ್ಷಕನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ..!

ಮಂಗಳೂರು : ಶಿಕ್ಷಕನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನಡೆದ ಘಟನೆ ಮೂಡಬಿದ್ರೆ ಠಾಣಾ ವ್ಯಾಪ್ತಿಯ ಕಲ್ಲಮಂಡ್ಕೂರುನಲ್ಲಿ ನಡೆದಿದೆ, ಕಲ್ಲಮುಂಡ್ಕೂರು ಸರ್ವೋದಯ ಪ್ರೌಢ ಶಾಲೆಯ ಶಿಕ್ಷಕ ಬೆಳ್ತಂಗಡಿ ಮೂಲದ ಗುರುವ ಲೈಂಗಿಕ ಕಿರುಕುಳ ಕೊಟ್ಟ ಶಿಕ್ಷಕ ವಿದ್ಯಾರ್ಥಿನಿಯರು ದೂರಿದ್ದಾರೆ.

8,9, ಮತ್ತು 10 ನೇ ತರಗತಿ ಹೊಂದಿರುವ ಈ ಶಾಲೆಯಲ್ಲಿ ಒಟ್ಟು 73 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಗುರುವ ಎನ್ನುವ ಶಿಕ್ಷಕ ಕನ್ನಡ ಮತ್ತು ಸಮಾಜ ವಿಜ್ಜಾನ ಪಾಠವನ್ನು ಭೋಧಿಸುವ ಶಿಕ್ಷಕರಾಗಿದ್ದರು , ಕಳೆದ 1996 ರಿಂದ ಗುರುವ ಈ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದು ಕಳೆದ ತಿಂಗಳು ಮಕ್ಕಳಿಗೆ ವಿಶೇಷ ತರಗತಿ ನಡೆಸುವ ನಿಟ್ಟಿನಲ್ಲಿ 10 ನೇ ತರಗತಿಯ ಒಟ್ಟು 26 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿ ಮತ್ತು ಒರ್ವಳು ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ಕುಳ್ಳಿರಿಸಿದ್ದಾನೆ, 10 ಜನ ವಿದ್ಯಾರ್ಥಿಗಳನ್ನು ಶಾಲೆಯ ಜಗುಲಿಯಲ್ಲಿ ಕುಳ್ಳಿರಿಸಿ ಎಲ್ಲರಿಗೂ ತಿನ್ನಲು ತಿಂಡಿ ನೀಡಿದ್ದಾನೆ,
ಒರ್ವಳೆ ಇದ್ದ ವಿದ್ಯಾರ್ಥಿನಿಯನ್ನು ಶಾಲಾ ಶಿಕ್ಷಕರ ಕೊಠಡಿಗೆ ಕರೆದು ಬಾಗಿಲು ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ, ಒಳಗೆ ಕರೆದ ಉದ್ದೇಶ ಏನಿರಬಹುದು ಎಂದು ಜಗಲಿಯಲ್ಲಿ ಕುಳಿತಿದ್ದ ಮಕ್ಕಳು ಬಾಗಿಲಿನ ಸಂದಿನಲ್ಲಿ ನೋಡುವಾಗ ಪ್ರಕರಣ ಬೆಳಕಿಗೆ ಬಂದಿದೆ, ಮತ್ತೆ ಹೊರ ಬಂದು ವಿದ್ಯಾರ್ಥಿಗಳನ್ನು ನೀವು ಶೌಚಾಲಯಕ್ಕೆ ಹೋಗಿ ಬನ್ನಿ ಎಂದು ತಿಳಿಸಿದ್ದು, ಆ ಸಂದರ್ಭ ವಿದ್ಯಾರ್ಥಿನಿ ಭಯದಿಂದ ವಿದ್ಯಾರ್ಥಿಗಳನ್ನು ಹೋಗದಂತೆ ವಿನಂತಿಸಿದ್ದಾಳೆ. ಈ ಪ್ರಕರಣ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕ ರಕ್ಷಕ ಸಂಘಕ್ಕೆ ತಿಳಿದು ಬಂದು ಕೂಡಲೇ ಮೂಡಬಿದ್ರೆ ಠಾಣೆಗೆ ಮುಖ್ಯ ಶಿಕ್ಷಕ ಸದಾನಂದ ಪೂಜಾರಿ ದೂರು ನೀಡಿದ್ದಾರೆ. ಇದೀಗ ಶಾಲೆಗೆ ಚೈಲ್ಡ್ ಲೈನ್ನ ನಂದಾ ಪಾಯಸ್, ಸಮಾಜಿಕ ಕಾರ್ಯಕರ್ತೆ ಪದ್ಮಿನಿ ವಸಂತ್, ಪಂಚಾಯತ್ ಅಧ್ಯಕ್ಷೆ ಪ್ರೇಮ ಶೆಟ್ಟಿ ಮತ್ತು ಸದಸ್ಯರು, ಮಂಗಳೂರು ಮಹಿಳಾ ಠಾಣೆಯವರು ಭೇಟಿ ನೀಡಿದ್ದು ಮಕ್ಕಳಿಂದ ಹೇಳಿಕೆ ಪಡೆಯುತಿದ್ದಾರೆ, ತಮ್ಮಗೂ ಈತ ಕಿರುಕುಳ ನೀಡಿದ್ದಾನೆ ಎಂದು ಹಲವು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ

ಶಿಕ್ಷಕ ಸುಮಾರು 27 ವರ್ಷದಿಂದ ಇದೇ ಶಾಲೆಯಲ್ಲಿ ಭೋಧಿಸುತ್ತಿದ್ದು ಈ ಹಿಂದೆಯೂ ಇಂತಹ ಪ್ರಕರಣಗಳು ನಡೆದಿದೆ ಆದರೆ ಭಯದಿಂದ ಯಾವುದೇ ವಿದ್ಯಾರ್ಥಿಗಳು ದೂರು ನೀಡಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ, ಐಕಳ ವ್ಯಾಪ್ತಿಯ ವಿದ್ಯಾರ್ಥಿನಿಯೋರ್ವಳು ಕಳೆದ ಎರಡು ತಿಂಗಳಿಂದ ಶಾಲೆಗೆ ಬರದೆ ಮನೆಯಲ್ಲೇ ಇದ್ದು, ಈ ಶಿಕ್ಷಕನ ಕಿರುಕುಳದಿಂದ ಶಾಲೆಗೆ ಬರುತಿಲ್ಲ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಇದೀಗ , ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಈತನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ಅಧಿಕಾರಿಗಳಲ್ಲಿ ಒತ್ತಾಯಿಸುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *