Connect with us

    LATEST NEWS

    ಹೋಮ್ ನರ್ಸ್ ನಿಂದ ಬಾಲಕಿಗೆ ಲೈಂಗಿಕ ದೌರ್ಜನ್ಯ – ಅಪರಾಧಿಗೆ 20 ವರ್ಷ ಕಠಿಣ ಸಜೆ

    ಮಂಗಳೂರು ಅಕ್ಟೋಬರ್ 07: ಆರು ವರ್ಷದ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಸಾಭೀತಾದ ಹಿನ್ನಲೆ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್ ಟಿಎಸ್ ಸಿ-2 ನ್ಯಾಯಾಲಯ ಆರೋಪಿಗೆ 20 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.


    ಹಾವೇರಿ ಜಿಲ್ಲೆಯ ನೆಲೋಗಲ್ ಗ್ರಾಮದ ಬೆನಕರಾಜ್ ಲಮಾಣಿ ಅಲಿಯಾಸ್ ರಾಜ್ (25) ಶಿಕ್ಷೆ ಗೊಳಗಾದಾತ. ನೊಂದ ಬಾಲಕಿಯ ಅಜ್ಜ ಅಸೌಖ್ಯ ದಿಂದ ಸುರತ್ಕಲ್‌ನ ಮನೆಯಲ್ಲಿದ್ದರು. ಅವರನ್ನು ಹೋಮ್ ನರ್ಸ್ ಆಗಿದ್ದ ಆರೋಪಿಯನ್ನು ಕರೆಸಿಕೊಳ್ಳಲಾಗಿತ್ತು. 2022ರ ಜನವರಿ ಯಲ್ಲಿ ಬಾಲಕಿ ತಾಯಿ ಔಷಧಕ್ಕೆಂದು ಹೋಗಿದ್ದಾಗ ಆರೋಪಿ ಬಾಲಕಿಯ ಮೇಲೆ ದೌರ್ಜನ್ಯವೆಸಗಿದ್ದ. ಈ ಬಗ್ಗೆ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‌ಸ್ಪೆಕ್ಟರ್ ಎಸ್.ಎಚ್.ಭಜಂತ್ರಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

    ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಮತ್ತು ಎಫ್‌ಟಿಎಸ್‌ಸಿ-2 ನ್ಯಾಯಾ ಲಯದ ನ್ಯಾಯಾಧೀಶ ಮಂಜುಳಾ ಇಟ್ಟಿ ಅವರು ಆರೋಪಿಯ ಅಪರಾಧ ಸಾಬೀತಾಗಿರುವ ಹಿನ್ನೆಲೆಯಲ್ಲಿ ಐಪಿಸಿ ಕಲಂ 376 ಮತ್ತು ಪೊಕ್ಕೊ ಕಲಂ 6ರ ಅಡಿಯಲ್ಲಿ 20 ವರ್ಷ ಕಠಿಣ ಸಜೆ ಮತ್ತು 25 ಸಾವಿರ ರೂ, ದಂಡ ಐಪಿಸಿ ಕಲಂ 323ರಡಿಯಲ್ಲಿ 6 ತಿಂಗಳ ಸಾದಾ ಸಜೆ ಮತ್ತು 1ಸಾವಿರ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡು ವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದ್ದಾರೆ. ಅಭಿಯೋಜನಾ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply