DAKSHINA KANNADA
ಮೆಡಿಕಲ್‌ಗೆ ನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ ಯುವಕನ ಹಿಡಿದು ಪೊಲೀಸ್ ವಶಕ್ಕೆ ಒಪ್ಪಿಸಿದ ಸ್ಥಳೀಯರು

ಪುತ್ತೂರು ಜೂನ್ 1: ಭಿನ್ನ ಕೋಮಿನ ಯುವಕನೋರ್ವ ಮೆಡಿಕಲ್‌ನ ಒಳಗೆ ನುಗ್ಗಿ ಮಹಿಳಾ ಸಿಬ್ಬಂದಿಯ ಮಾನಭಂಗಕ್ಕೆ ಯತ್ನಿಸಿರುವ ಘಟನೆ ಈಶ್ವರಮಂಗಲದಲ್ಲಿ ನಡೆದಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಪೇಟೆಯಲ್ಲಿರುವ ಮೆಡಿಕಲ್‌ಗೆ ಔಷಧಿ ಖರೀದಿಸಲು ಬಂದಿರುವ ಯುವಕ ಮೆಡಿಕಲ್‌ನಲ್ಲಿ ಯುವತಿಯೋರ್ವಳೆ ಇರುವುದನ್ನು ಕಂಡು ನೇರವಾಗಿ ಒಳನುಗ್ಗಿ ಯುವತಿಯ ಮಾನಭಂಗಕ್ಕೆ ಯತ್ನಿಸಿದ್ದಾನೆ.

ಈ ಸಂದರ್ಭದಲ್ಲಿ ಯುವತಿ ಬೊಬ್ಬೆ ಹೊಡೆದಾಗ ಸುತ್ತ ಮುತ್ತಲ ಜನರು ಜಮಾಯಿಸಿ, ಆರೋಪಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹೆಚ್ಚಿನ ವಿವರ ಲಭ್ಯವಾಗಬೇಕಿದೆ