LATEST NEWS
‘ಲೈಂಗಿಕ ದೌರ್ಜನ್ಯ ಆರೋಪ ಸುಳ್ಳು,ಕೆಲಸ ಕಳಕೊಳ್ಳುವ ಭಯ,ಹಗೆತನದಿಂದ ಕೃತ್ಯ’ : ಮೂಡಾ ಆಯುಕ್ತ ಮನ್ಸೂರ್ ಅಲಿ ಹೇಳಿಕೆ

ಸರಿಯಾಗಿ ಕೆಲಸ ಮಾಡೋದಿದ್ದರೆ ಇಲ್ಲಿರಿ, ಇಲ್ಲಾಂದ್ರೆ ಬೇರೆಯವರು ಕೆಲಸ ಮಾಡ್ತಾರೆ ಎಂದಿದ್ದೆ ಜೊತೆಗೆ ಅವರ ಬದಲಿಗೆ ಬೇರೆ ಸಿಬಂದಿ ನೀಡುವಂತೆ ಹೊರಗುತ್ತಿಗೆ ಏಜನ್ಸಿಗೂ ತಿಳಿಸಿದ್ದೆ. ಇದರಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಮತ್ತು ತನ್ನ ಮೇಲೆ ಹಗೆತನದಿಂದ ಈ ರೀತಿ ದೂರು ಕೊಟ್ಟಿದ್ದಾರೆ.
ಮಂಗಳೂರು : ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡುವ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ಮೂಡ ಆಯುಕ್ತ ಮನ್ಸೂರ್ ಅಲಿ ಮೇಲೆ ಉರ್ವಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

ಈ ಹಿನ್ನೆಲೆಯಲ್ಲಿ ಉರ್ವ ಪೊಲೀಸ್ ಠಾಣೆಗೆ ಹಾಜರಾಗಿ ತನಿಖಾಧಿಕಾರಿಗೆ ಆಯುಕ್ತ ಮನ್ಸೂರ್ ಅಲಿ ಹೇಳಿಕೆ ನೀಡಿದ್ದಾರೆ. ಬಳಿಕ ಸಹೋದ್ಯೋಗಿ ಮಹಿಳೆಯ ಆರೋಪದ ಬಗ್ಗೆ ಆಯುಕ್ತ ಮನ್ಸೂರ್ ಆಲಿ ಪ್ರತಿಕ್ರಿಯೆ ನೀಡಿದ್ದು, ಮೂಡಾ ಕಚೇರಿಯಲ್ಲಿ ಡಿ.27ರಂದು ನಡೆದ ಸಾಮಾನ್ಯ ಸಭೆಯ ನಡಾವಳಿ ಬರೆದುಕೊಡಲು ಮಹಿಳ ಸಿಬಂದಿಗೆ ತಿಳಿಸಿದ್ದೆ. ನೂರು ಪುಟಗಳ ವರದಿಯನ್ನು ತಪ್ಪು ತಪ್ಪಾಗಿ ಬರೆದುಕೊಟ್ಟಿದ್ದರು. ಇದರ ಬಗ್ಗೆ ಕೇಳಿದಕ್ಕೆ ಇಷ್ಟೊಂದು ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದಿದ್ದರು. ಅದಕ್ಕೆ ಸರಿಯಾಗಿ ಕೆಲಸ ಮಾಡೋದಿದ್ದರೆ ಇಲ್ಲಿರಿ, ಇಲ್ಲಾಂದ್ರೆ ಬೇರೆಯವರು ಕೆಲಸ ಮಾಡ್ತಾರೆ ಎಂದಿದ್ದೆ ಜೊತೆಗೆ ಅವರ ಬದಲಿಗೆ ಬೇರೆ ಸಿಬಂದಿ ನೀಡುವಂತೆ ಹೊರಗುತ್ತಿಗೆ ಏಜನ್ಸಿಗೂ ತಿಳಿಸಿದ್ದೆ. ಇದರಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಮತ್ತು ತನ್ನ ಮೇಲೆ ಹಗೆತನದಿಂದ ಈ ರೀತಿ ದೂರು ಕೊಟ್ಟಿದ್ದಾರೆ.ಈಗಾಗಲೇ ತನಿಖಾಧಿಕಾರಿ ಮುಂದೆ ಹಾಜರಾಗಿ ವಿವರವಾದ ಮಾಹಿತಿ ನೀಡಿದ್ದೇನೆ. ದೂರುದಾರ ಸಿಬಂದಿಗೂ ತಪ್ಪು ಅರಿವಾಗಿದ್ದು ಕೂಡ ಈ ರೀತಿ ಮಾಡಬಾರದಿತ್ತು ಎಂದು ಹೇಳಿದ್ದಾರೆ. ಈಗ ಕಚೇರಿ ಕೆಲಸಕ್ಕೆ ಬರುತ್ತಿದ್ದು ಎಲ್ಲ ವಿಚಾರಗಳನ್ನು ಮೇಲಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ.