LATEST NEWS
ಹಿರಿಯ ಅಧಿಕಾರಿಗಳ ಕಿರುಕುಳ – ಸರಕಾರಿ ಮೊಬೈಲ್ ಠಾಣೆಯಲ್ಲಿಟ್ಟು ಹೊರ ನಡೆದ ಎಸ್ಸೈ

ಹಿರಿಯ ಅಧಿಕಾರಿಗಳ ಕಿರುಕುಳ – ಸರಕಾರಿ ಮೊಬೈಲ್ ಠಾಣೆಯಲ್ಲಿಟ್ಟು ಹೊರ ನಡೆದ ಎಸ್ಸೈ
ಉಡುಪಿ ಜುಲೈ 6: ಹಿರಿಯ ಅಧಿಕಾರಿಗಳ ಕಿರುಕುಳ ಆರೋಪಕ್ಕೆ ಎಸ್ಸೈ ಒಬ್ಬರು ತಮ್ಮ ಸರಕಾರಿ ಮೊಬೈಲ್ ನ್ನು ಠಾಣೆಯಲ್ಲಿಟ್ಟು ಹೊರ ನಡೆದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್ ಠಾಣೆಯ ಎಸ್ಸೈ ಮಹಾಬಲ ಶೆಟ್ಟಿ ಅವರಿಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ ಆರೋಪದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ.

ಸಿವಿಲ್ ವ್ಯಾಜ್ಯ ಸಂಬಂಧ ಹಿರಿಯ ಅಧಿಕಾರಿಗಳು ಎಸ್ಸೈ ಮಹಾಬಲ ಶೆಟ್ಟಿ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದರು ಎಂದು ಹೇಳಲಾಗಿದ್ದು, ಈ ಹಿನ್ನಲೆಯಲ್ಲಿ ಮನನೊಂದು ಎಸ್ಸೈ ಮಹಾಬಲ ಶೆಟ್ಟಿ ಅವರು ಕರ್ತವ್ಯದಿಂದ ವಿಮುಖರಾಗಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಮಹಾಬಲ ಶೆಟ್ಟಿ ಅವರು ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಹಬ್ಬಿದ್ದು , ಹಿರಿಯ ಅಧಿಕಾರಿಗಳು ಮಹಾಬಲ ಶೆಟ್ಟಿ ಅವರ ಮನವೊಲಿಕೆಗೆ ಯತ್ನ ನಡೆಸಿದ್ದಾರೆ.
ಈ ಘಟನೆ ಕುರಿತು ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.