LATEST NEWS
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.54 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ವಿದೇಶಿ ಕರೆನ್ಸಿ ವಶ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 3.54 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ವಿದೇಶಿ ಕರೆನ್ಸಿ ವಶ
ಮಂಗಳೂರು ಅಗಸ್ಟ್ 30: ದುಬೈಗೆ ಅಕ್ರಮವಾಗಿ ವಿದೇಶಿ ಕರೆನ್ಸಿ ಸಾಗಿಸಲು ಯತ್ನಿಸುತ್ತಿದ್ದ ಆರೋಪಿಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಬಂಧಿತನನ್ನು ಉಲ್ವಾರ್ ಖಾದರ್ ಹಾಜಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಲಿದ್ದು, ತನ್ನ ಒಳ ಪ್ಯಾಂಟಿನ ಕಿಸೆಯಲ್ಲಿ ಸುಮಾರು 3.54 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ನೋಟುಗಳನ್ನು ಇಟ್ಟುಕೊಂಡು ಸಾಗಿಸುತ್ತಿದ್ದ. ತಪಾಸಣೆ ವೇಳೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಅಕ್ರಮ ವಿದೇಶಿ ಕರೆನ್ಸಿ ಇರುವುದು ಪತ್ತೆಯಾಗಿದೆ.

ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 18,500 ಸೌದಿ ರಿಯಾಲ್, 260 ಯುಎಇ ದಿರ್ಹಾಮ್, 100 ಬೆಹ್ರೈನ್ ದಿನಾರ್ ಹೀಗೆ ಒಟ್ಟು 3.54 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.