BANTWAL
ಬಂಟ್ವಾಳ: ಪೊಲೀಸ್ ಇಲಾಖೆಯ ವತಿಯಿಂದ ಗರ್ಭಿಣಿ ಮಹಿಳೆಗೆ ಸೀಮಂತ

ಬಂಟ್ವಾಳ: ಪೊಲೀಸ್ ಇಲಾಖೆಯ ವತಿಯಿಂದ ಗರ್ಭಿಣಿ ಮಹಿಳೆಗೆ ಸೀಮಂತ
ಬಂಟ್ವಾಳ ಸೆಪ್ಟೆಂಬರ್ 10: ಪೊಲೀಸ್ ಇಲಾಖೆಯ ವತಿಯಿಂದ ಗರ್ಭಿಣಿ ಮಹಿಳೆಗೆ ಪೊಲೀಸ್ ಠಾಣೆಯಲ್ಲೇ ಸೀಮಂತ ಕಾರ್ಯಕ್ರಮ ನಡೆಯಿತು. ಇದೇನಪ್ಪಾ ಅಂತ ಅಂದು ಕೊಂಡಿದ್ದೀರಾ… ಹೌದು ವಿಟ್ಲ ಪೋಲೀಸ್ ಠಾಣೆಯಲ್ಲಿ ಇಂತಹದೊಂದು ಮಾನವೀಯ ಮೌಲ್ಯಗಳ ಕಾರ್ಯಕ್ರಮ ನಡೆದಿದೆ.
ವಿಟ್ಲ ಪೋಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಹೋಮ್ ಗಾರ್ಡ್ ಆಗಿ ಕೆಲಸ ಮಾಡುವ ಪುತ್ತೂರು ನಿವಾಸಿ ಮಲ್ಲಿಕಾ ಅವರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.

ತುಂಬು ಗರ್ಭಿಣಿ ಮಹಿಳೆ ಮಲ್ಲಿಕಾ ಅವರನ್ನು ವಿಟ್ಲ ಠಾಣಾ ಎಸ್. ಐ.ಯಲ್ಲಪ್ಪ ಅವರು ಮತ್ತು ಠಾಣಾ ಸಿಬ್ಬಂದಿಗಳು ಒಟ್ಟು ಸೇರಿ ಠಾಣೆಯಲ್ಲಿ ಸೀಮಂತ ಕಾರ್ಯಕ್ರಮ ಮಾಡಿ ಬೀಳ್ಕೊಟ್ಟರು. ಮಾನವೀಯ ಮೌಲ್ಯದ ಈ ಕಾರ್ಯಕ್ರಮವನ್ನು ವಿಟ್ಲದ ಜನತೆ ಶ್ಲಾಘಿಸಿದ್ದಾರೆ.