LATEST NEWS
ಪಶ್ಚಿಮವಲಯ ಐಜಿಪಿಯಾಗಿ ಸೀಮಂತ್ ಕುಮಾರ್ ನೇಮಕ

ಪಶ್ಚಿಮವಲಯ ಐಜಿಪಿಯಾಗಿ ಸೀಮಂತ್ ಕುಮಾರ್ ನೇಮಕ
ಮಂಗಳೂರು : ಮಂಗಳೂರು ಪಶ್ಚಿಮ ವಲಯದ ಐಜಿಪಿಯಾಗಿ ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪಶ್ಚಿಮ ವಲಯದ ಐಜಿಪಿಯಾಗಿದ್ದ ಅರುಣ್ ಚಕ್ರಮರ್ತಿ ಸ್ಥಾನಕ್ಕೆ ಸೀಮಂತ್ ಕುಮಾರ್ ಸಿಂಗ್‌ರನ್ನು ನಿಯೋಜಿಸಿ ಆದೇಶ ಹೊರಡಿಸಲಾಗಿದೆ.
ಅರುಣ್ ಚಕ್ರಮರ್ತಿಯವರನ್ನು ಸದ್ಯ ಬೆಂಗಳೂರಿನ ರೈಲ್ವೇ ವಿಭಾಗದ ಡಿಜಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ. ಇನ್ನು ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಆಡಳಿತಾಧಿಕಾರಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಈ ಹಿಂದೆ ಕೂಡ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಮತ್ತು ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.

ಜಿಲ್ಲೆಯಲ್ಲಿ ಕೋಮುಗಲಭೆ, ಅಹಿತಕರ ಘಟನೆ ನಡೆದ ಸಂದರ್ಭಗಳಲ್ಲಿ ಸ್ಥಳದಲ್ಲೇ ಮೊಕ್ಕಾಂ ಹೂಡಿ ಅಧೀನ ಅಧಿಕಾರಿಗಳಿಗೆ ಸ್ಥೈರ್ಯ ತುಂಬುವ ಮೂಲಕ ಗಮನ ಸೆಳೆದಿದ್ದರು.