LATEST NEWS
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳೂರು ಭೇಟಿ ವೇಳೆ ಭದ್ರತಾ ವೈಫಲ್ಯ – ಕಾನ್ವೆಗೆ ಸ್ಕೂಟರ್ ನುಗ್ಗಿಸಲು ಯತ್ನಿಸಿ ರಸ್ತೆ ಮೇಲೆ ಬಿದ್ದ ಸವಾರ
ಮಂಗಳೂರು ಜನವರಿ 13: ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಗಳೂರು ಭೇಟಿ ಸಮಯದಲ್ಲಿ ಭಾರೀ ಭದ್ರತೆಯ ನಿರ್ಲಕ್ಷ್ಯವುಂಟಾಗಿದ್ದು,. ಸ್ಕೂಟರ್ ಸವರಾನೊಬ್ಬ ಕಾನ್ವೆ ಗೆ ನುಗ್ಗಿಸಲು ಹೋಗಿ ರಸ್ತೆ ಮದ್ಯೆ ಬಿದ್ದ ಘಟನೆ ನಡೆದಿದೆ.
ಶನಿವಾರ ಮಂಗಳೂರಿಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಈ ವೇಳೆ ತೊಕ್ಕೋಟು ಸಮೀಪದ ಚೆಂಬುಗುಡ್ಡೆ ಎಂಬಲ್ಲಿ ಸ್ಕೂಟರ್ ಸವಾರನೊಬ್ಬ ಸಿಎಂ ಕಾನ್ವೇ ತೆರಳುವ ಸಂದರ್ಭದ ಸ್ಕೂಟರ್ ನುಗ್ಗಿಸಲು ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ರಸ್ತೆ ಮೇಲೆ ಸ್ಕೂಟರ್ ಸವಾರ ಬಿದ್ದಿದ್ದಾನೆ.
ಒಂದು ವೇಳೆ ಸ್ಕೂಟರ್ ಸ್ಕಿಡ್ ಆಗದೆ ಇದ್ದಲ್ಲಿ ಸ್ಕೂಟರ್ ಸವಾರ ನೇರವಾಗಿ ಸಿಎಂ ಕಾನ್ವೇ ಬಳಿ ಸಾಗುತ್ತಿದ್ದ, ಸದ್ಯ ಸಿಎಂ ಭದ್ರತೆಯಲ್ಲಿ ನಿರ್ಲಕ್ಷ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.