DAKSHINA KANNADA
ದ್ವಿತೀಯ ಪಿಯುಸಿ ಪರೀಕ್ಷೆ – ಸಂಸ್ಕೃತದಲ್ಲಿ 100ಕ್ಕೆ 96 ಅಂಕ ಪಡೆದ ಪುತ್ತೂರಿನ ಆಶಿಫಾ ಹುಸೈನ್

ಪುತ್ತೂರು ಎಪ್ರಿಲ್ 09: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮುಸ್ಲಿಂ ಸಮುದಾಯದ ವಿಧ್ಯಾರ್ಥಿನಿಯೊಬ್ಬಳು ಸಂಸ್ಕೃತದಲ್ಲಿ 100ಕ್ಕೆ 96 ಅಂಕ ಪಡೆದಿದ್ದಾಳೆ.
ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲ್ಲೂಕಿನ ಕಾವು ಅಮ್ಮಿನಡ್ಕದ ನಿವಾಸಿ ಬೆಂಗಳೂರಿನಲ್ಲಿ ಕೇಂದ್ರ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿರುವ ಖೈರುನ್ನೀಸಾ ಮತ್ತು ಜಾಕೀರ್ ದಂಪತಿ ಪುತ್ರಿ ಆಶಿಫಾ ಹುಸೈನ್ ಸಂಸ್ಕೃತದಲ್ಲಿ 100ಕ್ಕೆ 96 ಅಂಕ ಪಡೆದಿದ್ದಾರೆ.

ಬೆಂಗಳೂರಿನ ನಾರಾಯಣ ಟೆಕ್ನ ಸ್ಕೂಲ್‌ನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡಿರುವ ಆಶಿಫಾ ಹುಸೈನ್, ಸಂಸ್ಕೃತವನ್ನು ದ್ವಿತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರು. ದ್ವಿತೀಯ ಪಿಯುಸಿಯಲ್ಲಿ ಒಟ್ಟು 563 ಅಂಕ ಗಳಿಸಿದ್ದಾರೆ.