LATEST NEWS
ಮಂಗಳೂರು: ನೇಣು ಬಿಗಿದು ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು ಅಗಸ್ಟ್ 27: ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಶಕ್ತಿನಗರ ನಾಲ್ಯಪದವು ಎಂಬಲ್ಲಿ ಸಂಭವಿಸಿದೆ. ಮೃತ ವಿಧ್ಯಾರ್ಥಿಯನ್ನು ಹರ್ಷದ್ ಕೌಶಲ್ (17) ಎಂದು ಗುರುತಿಸಲಾಗಿದೆ.
ಈತ ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ಕರಾಟೆ ಪಟುವೂ ಆಗಿದ್ದ. ಗುರುವಾರ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಕೌಶಲ್ ಕೃತ್ಯ ಮಾಡಿಕೊಂಡಿದ್ದಾನೆ. ಇನ್ನು ಮನೆಯ ಮೇಲಿನ ಅಂತಸ್ತಿನಲ್ಲಿ ಕೌಶಲ್ ಮಾತ್ರ ಇದ್ದ. ಕೆಳಗೆ ಆತನ ಅಜ್ಜಿ ಮತ್ತು ಸಂಬಂಧಿ ಹುಡುಗಿ ಇದ್ದರು. ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು. ಸಂಜೆ 5.30ರ ಸುಮಾರಿಗೆ ತಾಯಿ ಕೆಲಸದಲ್ಲಿಂದ ಮಗನಿಗೆ ಕರೆ ಮಾಡಿದ್ದರು. ಕೌಶಲ್ ಕರೆ ಸ್ವೀಕರಿಸಲಿಲ್ಲ. ತಾಯಿ ಕೂಡಲೇ ಹರ್ಷದ್‌ನ ಅಜ್ಜಿಗೆ ಕರೆ ಮಾಡಿ ತಿಳಿಸಿದ್ದರು. ಬಳಿಕ ಮಹಡಿಯ ಕೋಣೆಯಲ್ಲಿ ನೋಡಿದಾಗ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
