LATEST NEWS
ಕೇರಳ – ಅಲೆಗಳಿಲ್ಲದೆ ಸ್ತಬ್ದವಾದ ಸಮುದ್ರದ ವಿಡಿಯೋ…!!
ಕೇರಳ ಅಕ್ಟೋಬರ್ 31: ಕೇರಳದ ಕೋಝಿಕ್ಕೋಡ್‌ನ ನೈನಂವಾಲಪ್ಪು ಸಮುದ್ರ ತೀರದಲ್ಲಿ ಒಂದು ವಿಭಿನ್ನ ವಿಧ್ಯಮಾನ ನಡೆದಿದ್ದು, ಸಮುದ್ರದ ನೀರು ಇಳಿಮುಖವಾಗಿದ್ದಲ್ಲದೇ ಸಮುದ್ರದಲ್ಲಿ ಯಾವುದೇ ಅಲೆಗಳಿಲ್ಲದೆ ಶಾಂತವಾಗಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಕೋಝಿಕ್ಕೋಡ್‌ನ ನೈನಂವಾಲಪ್ಪು ಬಳಿಯ ಕೋಠಿ ಬೀಚ್‌ನಲ್ಲಿ ಶನಿವಾರ ಸಂಜೆ ಸಮುದ್ರದ ನೀರು ಇಳಿಯತೊಡಗಿದ್ದು, ಸುಮಾರ 50 ಮೀಟರ್ ವರೆಗೆ ಸಮುದ್ರ ಹಿಂದಕ್ಕೆ ಹೋಗಿತ್ತು. ಸಮುದ್ರದಲ್ಲಿ ಯಾವುದೇ ರೀತಿಯ ಅಲೆಗಳು ಕಂಡು ಬಂದಿಲ್ಲ. ಸಮುದ್ರ ಒಂದು ರೀತಿ ಶಾಂತವಾಗಿದ್ದು, ಸರೋವರದ ರೀತಿಯಲ್ಲಿ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆದರೆ ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸುನಾಮಿಯ ಸಾಧ್ಯತೆಯನ್ನು ತಳ್ಳಿಹಾಕಿದೆ ಏಕೆಂದರೆ ಸಮುದ್ರದ ಹಿಂತೆಗೆದುಕೊಳ್ಳುವಿಕೆಯನ್ನು ಸಾಮಾನ್ಯವಾಗಿ ನೈಸರ್ಗಿಕ ವಿಧಾನಎಂದು ಪರಿಗಣಿಸಲಾಗುತ್ತದೆ. “ಅರೇಬಿಯನ್ ಸಮುದ್ರ ಅಥವಾ ಹಿಂದೂ ಮಹಾಸಾಗರದಲ್ಲಿ ಯಾವುದೇ ಭೂಕಂಪ ಅಥವಾ ಸುನಾಮಿ ಎಚ್ಚರಿಕೆಗಳನ್ನು ನೀಡಲಾಗಿಲ್ಲ. ಆದ್ದರಿಂದ, ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ಸಮೀಪದಲ್ಲಿ ವಾಸಿಸುವವರು ಸಮುದ್ರಕ್ಕೆ ಇಳಿಯಬಾರದು” ಎಂದು ಕೆಎಸ್‌ಡಿಎಂಎ ಪ್ರಕಟಣೆಯಲ್ಲಿ ತಿಳಿಸಿದೆ.
ಅಪರೂಪದ ವಿದ್ಯಮಾನವನ್ನು ವೀಕ್ಷಿಸಲು ಸ್ಥಳೀಯರು ಮತ್ತು ಜಿಲ್ಲೆಯ ಇತರ ಭಾಗಗಳಿಂದ ಜನರು ಸೇರುತ್ತಿದ್ದರಿಂದ, ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ರಕ್ಷಣಾ ಇಲಾಖೆ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು.