LATEST NEWS
ಭಾರಿ ಮಳೆಗೆ ಕೊಚ್ಚಿ ಹೋದ ವಿಧ್ಯಾರ್ಥಿನಿಗಾಗಿ ಹುಡುಕಾಟ

ಭಾರಿ ಮಳೆಗೆ ಕೊಚ್ಚಿ ಹೋದ ವಿಧ್ಯಾರ್ಥಿನಿಗಾಗಿ ಹುಡುಕಾಟ
ಉಡುಪಿ ಮೇ 29: ಉಡುಪಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ನಾಲ್ಕನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಕೊಚ್ಚಿ ಹೋದ ಘಟನೆ ನಡೆದಿದೆ. ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಉಡುಪಿ ಜಿಲ್ಲೆ ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಈ ದುರ್ಘಟನೆ ನಡೆದಿದೆ.
ನಿಧಿ ಪಡುಬಿದ್ರೆಯ ಗಣಪತಿ ಸ್ಕೂಲ್ ನ ವಿದ್ಯಾರ್ಥಿನಿ. ಮೂರು ಗಂಟೆಗೆ ಶಾಲೆ ಬಿಟ್ಟಿದ್ದು, ಮಳೆಯಿದ್ದ ಕಾರಣ ಮಕ್ಕಳಿಬ್ಬರು ತಡವಾಗಿ ಶಾಲೆಯಿಂದ ಹೊರಟಿದ್ದಾರೆ. ಪಡುಬಿದ್ರಿ ಪಾದೆಬೆಟ್ಟು ಎಂಬಲ್ಲಿ ನಿಧಿ ಆಚಾರ್ಯ ಎಂಬ 9 ವರ್ಷದ ಬಾಲಕಿ ಕಣ್ಮರೆಯಾಗಿದ್ದಾಳೆ. ನಿಧಿ ಆಚಾರ್ಯ ತನ್ನ ಅಕ್ಕ ನಿಶಾ ಆಚಾರ್ಯ ಜೊತೆ ಸೈಕಲ್ ನಲ್ಲಿ ಮನೆಗೆ ತೆರಳುತ್ತಿದ್ದಳು.

ಪಟ್ಲ ಎಂಬಲ್ಲಿ ಕಿರು ಸೇತುವೆ ದಾಟುವಾಗ ಅವಘಡವಾಗಿದೆ. ರಭಸವಾಗಿ ಹರಿಯುತ್ತಿದ್ದ ನೀರು ಸೇತುವೆ ಮೇಲೆ ಬಂದಿತ್ತು. ಆ ರಭಸಕ್ಕೆ ಇಬ್ಬರು ಮಕ್ಕಳು ನೀರುಪಾಲಾಗಿದ್ದಾರೆ. ಈ ನಡುವೆ ನಿಶಾ ಆಚಾರ್ಯಳನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ನಿಧಿ ಆಚಾರ್ಯ ನೀರು ಪಾಲಾಗಿದ್ದಾಳೆ. ಕಣ್ಮರೆಯಾದ ನಿಧಿ ಆಚಾರ್ಯಳಿಗೆ ಶೋಧಕಾರ್ಯ ಮುಂದುವರೆದಿದೆ.
ಕುಟುಂಬಸ್ಥರು, ಸ್ಥಳೀಯರು ಬಾಲಕಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂಧಿ, ಪೊಲೀಸರು ಹುಡುಕಾಟ ಮಾಡುತ್ತಿದ್ದಾರೆ. ವಿಪರೀತ ಮಳೆಯಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ.