UDUPI
ಕೊರೊನಾ ಸೊಂಕಿತನ ಮನೆ ಮಾತ್ರ ಸೀಲ್ ಡೌನ್ ಮಾಡುವ ಪ್ರಸ್ತಾವ ಇದೆ – ಡಾ. ಸುಧಾಕರ್
ಉಡುಪಿ ಜೂನ್ 3: ರಾಜ್ಯ ಸರಕಾರ ಹೊರ ರಾಜ್ಯಗಳಿಂದ ಆಗಮಿಸಿದವರ ಸಾಂಸ್ಥಿಕ ಕ್ವಾರಂಟೈನ್ ಅವಧಿ 7 ದಿನಕ್ಕೆ ಮೊಟಕುಗೊಳಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಸಚಿವ ಡಾ. ಸುಧಾಕರ್ ಸ್ಪಷ್ಟನೆ ನೀಡಿದ್ದಾರೆ.
ಹೊರ ರಾಜ್ಯ ದೇಶಗಳಿಂದ ಬರುವ ಸಾವಿರಾರು ಜನರನ್ನು ಕ್ವಾರಂಟೈನ್ ಮಾಡೋದು ಕಷ್ಟವಾಗಿದ್ದು, ಅಲ್ಲದೆ ಕೇಂದ್ರ ಸರಕಾರ ಕಂಟೈನ್ಮೆಂಟ್ ಜೋನ್ ನ ಡೆಫಿನೇಶನ್ ಕೂಡ ಬದಲಾಗಿದ್ದು, ಆರಂಭದಲ್ಲಿ ಕೊರೊನಾ ಸೊಂಕು ಕಂಡು ಬಂದರೆ ಒಂದು ಕಿಲೋಮೀಟರ್ ಕಂಟೇನ್ಮೆಂಟ್ ಮಾಡಿದ್ದೆವು, ಈಗ ನೂರು ಮೀಟರ್ ಕಂಟೈನ್ಮೆಂಟ್ ಮಾಡ್ತಿದ್ದೇವೆ.
ಈಗ ಸೋಂಕಿತನ ಮನೆಯ ಬೀದಿಯನ್ನು ಮಾತ್ರ ಕಂಟೈನ್ಮೆಂಟ್ ಮಾಡಲಾಗುತ್ತಿದೆ. ಇನ್ನು ಮುಂದೆ ಕೇವಲ ಸೋಂಕಿತನ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡುವ ಪ್ರಸ್ತಾವ ಇದೆ ಕೂಡ ಇದೆ ಎಂದು ಅವರು ತಿಳಿಸಿದರು. ಅಂತಹ ಸಂದರ್ಭ ಸೊಂಕಿತನ ಮನೆಗೆ ಅಗತ್ಯ ವಸ್ತು ಸರಕಾರದಿಂದಲೇ ಒದಗಿಸಲಾಗುತ್ತದೆ. ಈ ಕುರಿತಂತೆ ಸರಕಾರ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದೆ ಎಂದು ಉಡುಪಿಯಲ್ಲಿ ವೈದ್ಯಕೀಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.