LATEST NEWS
ಸಮುದ್ರದ ಅಲೆಯ ಹೊಡೆತಕ್ಕೆ ಜಾರಿ ಬಿದ್ದ ಬೈಂದೂರು ಶಾಸಕ ಸುಕುಮಾರ ಶೆಟ್ಟಿ

ಸಮುದ್ರದ ಅಲೆಯ ಹೊಡೆತಕ್ಕೆ ಜಾರಿ ಬಿದ್ದ ಬೈಂದೂರು ಶಾಸಕ ಸುಕುಮಾರ ಶೆಟ್ಟಿ
ಉಡುಪಿ ಅಕ್ಟೋಬರ್ 09: ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಮುದ್ರ ಸ್ನಾನಕ್ಕೆ ಆಗಮಿಸಿದ್ದ ಬೈಂದೂರು ಶಾಸಕ ಸಮುದ್ರದ ಅಲೆಯ ಹೊಡೆತಕ್ಕೆ ಜಾರಿ ಬಿದ್ದ ಘಟನೆ ನಡೆದಿದೆ.
ಮಹಾಲಯ ಅಮಾವಸ್ಯೆ ಹಿನ್ನಲೆಯಲ್ಲಿ ಬೈಂದೂರು ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಅವರು ಇಂದು ಉಡುಪಿಯ ತ್ರಾಸಿ ಬೀಚ್ ಗೆ ಸಮುದ್ರ ಸ್ನಾನಕ್ಕೆ ತೆರಳಿದ್ದರು, ಆದರೆ ಚಂಡ ಮಾರುತ ಹಿನ್ನಲೆಯಲ್ಲಿ ಸಮುದ್ರದಲ್ಲಿ ಬಾರಿ ಗಾತ್ರದ ಅಲೆಗಳು ಏಳುತ್ತಿದ್ದರು ಲೆಕ್ಕಿಸದೇ ಸಮುದ್ರದಲ್ಲಿ ಮುಳುಗಿ ಸ್ನಾನಕ್ಕೆ ಶಾಸಕರು ಇಳಿದಿದ್ದರು.

ಶಾಸಕರ ಸಹವರ್ತಿಗಳು ದಡದಲ್ಲೇ ಮುಳುಗುವಂತೆ ಸೂಚನೆ ನೀಡಿದ್ದರೂ ಸಹ ಲೆಕ್ಕಿಸದೇ ಸಮುದ್ರದಲ್ಲಿ ಸ್ನಾನಕ್ಕೆ ಶಾಸಕ ಸುಕುಮಾರ ಶೆಟ್ಟಿ ಇಳಿದಿದ್ದರು, ಆದರೆ ಚಂಡಮಾರುತ ಹಿನ್ನಲೆಯಲ್ಲಿ ಸಮುದ್ರದಲ್ಲಿ ಬಾರಿ ಗಾತ್ರದ ಅಲೆಗಳು ಏಳುತ್ತಿದ್ದು, ಸಮುದ್ರದಲ್ಲಿ ಮುಳುಗಲು ಹೋದ ಶಾಸಕ ಸುಕುಮಾರ ಶೆಟ್ಟಿ ಅವರಿಗೆ ಭಾರಿ ಅಲೆಯೊಂದು ಹೊಡೆತ ನೀಡಿದ್ದು, ಅಲೆಯ ಹೊಡೆತಕ್ಕೆ ಶಾಸಕರು ಜಾರಿ ಬಿದ್ದರು. ಶಾಸಕರು ಸಮುದ್ರ ಸ್ನಾನಕ್ಕೆ ತೆರಳಿ ಜಾರಿ ಬಿದ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.